ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ಪರದಾಡುತ್ತಿದ್ದ ನಟ ದರ್ಶನ್ ಗೆ ರಿಲೀಫ್ ಸಿಕ್ಕಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಏಕಸದಸ್ಯ ನ್ಯಾಯಪೀಠ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಆದರೆ ಪಾಸ್ ಪೋರ್ಟ್ ಸೆರೆಂಡರ್ ಮಾಡಬೇಕೆಂದು ಆದೇಶಿಸಲಾಗಿದ್ದು, ಚಿಕಿತ್ಸೆಯ ವಿವರವನ್ನು ಕೋರ್ಟಿಗೆ ನೀಡಬೇಕೆನ್ನುವ ಶರತ್ತು ಕೂಡ ವಿದಿಸಲಾಗಿದೆ. 131ದಿನಗಳ ಬಳಿಕ ಜೈಲಿನಿಂದ ಹೊರಬರುತ್ತಿರುವ ದರ್ಶನ್ ಸ್ವಾಗತಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.