image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕಲು ಗಡಿಪಾರು- ಪುನೀತ್ ಅತ್ತಾವರ

ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕಲು ಗಡಿಪಾರು- ಪುನೀತ್ ಅತ್ತಾವರ

 ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮುಡೇಲ್ ಸುಮಾರು  ವರ್ಷಗಳಿಂದ ಸಂಘಟನೆಯಲ್ಲಿ ಜೋಡಿಸಿಕೊಂಡು  ಧರ್ಮರಕ್ಷಣೆಯ, ಗೋಸಂರಕ್ಷಣೆ, ಮಾತೆಯರ ರಕ್ಷಣೆ ಅಲ್ಲದೆ ಮಾಧಕ ದೃವ್ಯ ,ಡ್ರಗ್ಸ್ ವಿರುದ್ಧ ಕೆಲಸ ಮಾಡುತ್ತಿದ್ದು, ರಾಜಕೀಯ ದ್ವೇಷದಿಂದ ಚುನಾವಣೆಯ ಸಂಧರ್ಭದಲ್ಲಿ ಯಾವುದೇ  ಕೆಲಸದಲ್ಲಿ ತೊಡಗಿಸಿಕೊಳ್ಳದಂತೆ ಕಾಂಗ್ರೆಸ್ ಸರಕಾರದ ಷಡ್ಯಂತ್ರ ರೂಪಿಸಿ ಭರತ್ ಕುಮುಡೇಲ್ ರವರ ಮೇಲೆ ಗಡಿಪಾರು ನೋಟೀಸು ನೀಡಿದೆ. ರಾಜ್ಯಸರ್ಕಾರದ ಈ ಹಿಂದೂ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸುತ್ತವೆ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಜರಂಗದಳ ನಿಷೇಧ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಿ  ಅಲ್ಪಸಂಖ್ಯಾತರ ವೋಟ್ ಗಳಿಸುವಲ್ಲಿ ಸಫಲವಾದ ಕಾಂಗ್ರೆಸ್ ಸರಕಾರ ಈ ಬಾರಿ ಅದೇ ದಾರಿಯನ್ನು ಮುಂದುವರಿಸಿದ್ದು ಅಲ್ಪಸಂಖ್ಯಾತರ ಓಲೈಕೆಗೋಸ್ಕರ ಹಿಂದೂ ಸಂಘಟನೆಯ ಕಾರ್ಯಕರತರನ್ನು ಗುರಿಯಾಗಿಸಿ ಷಡ್ಯಂತ್ರ ರೂಪಿಸುತ್ತಿದೆ. ಕಾಂಗ್ರೆಸ್ ಸರಕಾರ ಈ ರೀತಿ ಗಡಿಪಾರು ಮಾಡುವ ಮೂಲಕ ಬಜರಂಗದಳ ಕಾರ್ಯಕರ್ತರನ್ನು ಧಮನಿಸುತ್ತೇವೆ ಎಂದುಕೊಂಡಿದ್ದರೆ ಅದು ಭ್ರಮೆ ನಿಮ್ಮ ಯಾವುದೇ ದ್ವೇಷ ರಾಜಕಾರಣದ ಅಸ್ತ್ರಕ್ಕೆ ಬಜರಂಗದಳ ಕಾರ್ಯಕರ್ತರು ಹೆದರುವುದಿಲ್ಲ, ಧರ್ಮದ, ರಾಷ್ಟ್ರದ ಕೆಲಸಕ್ಕೆ ಬಜರಂಗದಳ ಕಾರ್ಯಕರ್ತರು ಯಾವಾಗಲು ಕಟಿಬದ್ಧ ಹಾಗಾಗಿ ಈ ಗಡಿಪಾರು ನೋಟೀಸನ್ನು ಹಿಂಪಡೆಯಬೇಕೆಂದು ಬಜರಂಗದಳ ವಿಭಾಗ ಸಂಯೋಜಕ್ ಪುನೀತ್ ಅತ್ತಾವರ ಆಗ್ರಹಿಸಿದರು.

Category
ಕರಾವಳಿ ತರಂಗಿಣಿ