ಗುಜರಾತ್ : ವಡೋದರದ ಖಾಸಗಿ ವಿಮಾನ ತಯಾರಿಕೆಯ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೇಜ್ ಅವರು ಉದ್ಘಾಟಿಸಿದರು.
ಉದ್ಘಾಟನೆಗೆ ಮುನ್ನ ವಡೋದರದ ರಸ್ತೆಗಳಲ್ಲಿ ಪ್ರಧಾನಿ ಮೋದಿ, ಸ್ಪೇನ್ ಅಧ್ಯಕ್ಷನ ಜೊತೆಗೆ ರೋಡ್ ಶೋ ನಡೆಸಿದರು. ಈ ಮೂಲಕ ಭಾರತದ ಮೊದಲ ಖಾಸಗಿ ಯುದ್ಧವಿಮಾನ ತಯಾರಿಕೆಯ ಘಟಕ ಗುಜರಾತ್ನ ವಡೋದರಾದಲ್ಲಿ ಚಾಲನೆಗೊಂಡಿದ್ದು. ಟಾಟಾ ಏರ್ಕ್ರಾಫ್ಟ್ ಕಾಂಪ್ಲೆಕ್ಸ್ನಲ್ಲಿ ಸಿ-295 ವಿಮಾನ ತಯಾರಿಕೆಯ ಘಟಕ ಇದಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ನ ಕ್ಯಾಂಪಸ್ನಲ್ಲಿರುವ ಈ ಘಟಕದಲ್ಲಿ ಸ್ಪೇನ್ ಮೂಲದ ವಿಮಾನ ತಯಾರಿಕೆಯ ಸಂಸ್ಥೆ ಏರ್ಬಸ್ ಸಹಯೋಗದಲ್ಲಿ ಸಿ-295 ಮಿಲಿಟರಿ ವಿಮಾನಗಳನ್ನು ತಯಾರಿಸಲಾಗುತ್ತದೆ.
ಒಟ್ಟಾರೆ ಈ ಯೋಜನೆಯಲ್ಲಿ 56 ವಿಮಾನಗಳ ತಯಾರಿಕೆಗೆ ಒಪ್ಪಂದವಾಗಿದ್ದು, ಏರ್ಬಸ್ ಸಂಸ್ಥೆ ತನ್ನ ದೇಶದಲ್ಲಿರುವ ತಯಾರಿಕಾ ಘಟಕದಿಂದ 16 ವಿಮಾನಗಳನ್ನು ತಯಾರಿಸಿ ಅಲ್ಲಿಂದಲೇ ನೇರವಾಗಿ ಭಾರತಕ್ಕೆ ಕಳುಹಿಸಲಿದೆ. ಇನ್ನುಳಿದ 40 ವಿಮಾನಗಳನ್ನು ಟಾಟಾ ಸಂಸ್ಥೆಯ ವಡೋದರಾ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.