image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ್ರಾವಿಡ ಹೆಸರಲ್ಲಿ ಒಂದು ಕುಟುಂಬ ರಾಜ್ಯವನ್ನೇ ಲೂಟಿ ಮಾಡುತ್ತಿದೆ :ನಟ ವಿಜಯ್‌

ದ್ರಾವಿಡ ಹೆಸರಲ್ಲಿ ಒಂದು ಕುಟುಂಬ ರಾಜ್ಯವನ್ನೇ ಲೂಟಿ ಮಾಡುತ್ತಿದೆ :ನಟ ವಿಜಯ್‌

ಚೆನೈ: ಒಂದು ಕುಟುಂಬವು ಭೂಗತ ಚಟುವಟಿಕೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇಂಥದ್ದಕ್ಕೆ ಅಂತ್ಯ ಹಾಡಲೆಂದೇ ನಾನು ನಟನೆ ಬಿಟ್ಟು ರಾಜಕೀಯಕ್ಕೆ ಬಂದಿದ್ದೇನೆ ಎಂದು ಖ್ಯಾತ ತಮಿಳು ನಟ ಹಾಗೂ ನೂತನ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್‌ ವಾಗ್ದಾಳಿ ನಡೆಸಿದ್ದಾರೆ. ಪಕ್ಷ ಸ್ಥಾಪನೆ ಬಳಿಕ ಇದೇ ಮೊದಲ ಬಾರಿ ವಿಲ್ಲುಪುರಂನಲ್ಲಿ ಪಕ್ಷದ ಮೊದಲ ರಾಜ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು,ರಾಜಕೀಯ ಎಂಬುದು ಸಿನಿಮಾ ಅಖಾಡವಲ್ಲ, ಅದು ಯುದ್ಧದ ಅಖಾಡ. ರಾಜಕೀಯಕ್ಕೆ ನಾನು ಹೊಸಬನಾದರೂ ಮುಗ್ಧ ಬಾಲಕನಲ್ಲ. ನಾನು ಹಾವಿನ ಜತೆ ಆಟವಾಡುವ ಬಾಲಕ’  ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ.

ಈ ರಾಜ್ಯದ ದೊಡ್ಡ ಶತ್ರುವೇ ಡಿಎಂಕೆ’, ನೇರ ಆಡಳಿತಕ್ಕೆ ಅಡ್ಡಿ ಆಗಿರುವ ರಾಜ್ಯಪಾಲ ಎಂಬ ಹುದ್ದೆಯನ್ನೇ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.  ‘ನಾನು ಪ್ರತ್ಯೇಕ ದ್ರಾವಿಡವಾದ ಮತ್ತು ತಮಿಳುವಾದದ ಪ್ರತಿಪಾದಕನಲ್ಲ. ಇವೆರಡೂ ನಮ್ಮ ನೆಲದ 2 ಕಣ್ಣುಗಳು. ಸಾಮಾಜಿಕ ನ್ಯಾಯದ ಪರ ನಾವು ಕೆಲಸ ಮಾಡಬೇಕು’ ಪೆರಿಯಾರ್ ಹಾಗೂ ಕಾಮರಾಜ್‌ ತತ್ವ ಅಳವಡಿಸಿಕೊಂಡ ಪಕ್ಷ ನಮ್ಮದು ಎಂದರು.

Category
ಕರಾವಳಿ ತರಂಗಿಣಿ