image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವ‌ರ್ ಖಂಡ್ರೆ

ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವ‌ರ್ ಖಂಡ್ರೆ

ಬೀದರ್ : ಮಂಡ್ಯ ಲೋಕಸಭಾ ಕ್ಷೇತದಿಂದ ಚುನಾವಣೆ ಸ್ಪರ್ಧೆಗೆ ಹಿಂದೆ ಸರಿದು ಬಿಜೆಪಿಗೆ ಬೆಂಬಲಿಸುವುದಾಗಿ ಸುಮಲತಾ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬೀದರ್ ನಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ ಅದೆಲ್ಲ ಸುಮಲತಾ ಅವರಿಗೆ ಬಿಟ್ಟ. ವಿಚಾರ ಜೆಡಿಎಸ್‌ ಪಕ್ಷದವರು ಸುಮಲತಾಗೆ ಯಾವ ರೀತಿ ಹೀಯಾಳಿಸಿದ್ದಾರೆ, ಕಷ್ಟ ಕೊಟ್ಟಿದ್ದಾರೆ, ತೊಂದರೆ ಕೊಟ್ಟಿದ್ದಾರೆ ಅದೆಲ್ಲ ಅವರ ಗಮನಕ್ಕಿದೆ, ಅದೆಲ್ಲ ಇಟ್ಟುಕೊಂಡು ಮತ್ತೆ ಬಿಜೆಪಿಗೆ ಹೋಗುತ್ತೇನೆಂದು ಹೇಳುತ್ತಿದ್ದಾರೆ ಅಂದ್ರೆ ಅವರಿಗೆ ಯಾವ ಒತ್ತಡ ಇದೆ ಗೊತ್ತಿಲ್ಲ. ಇಡಿ, ಐಟಿ ಒತ್ತಡ ಏನಾದರೂ ಮಾಡಿದಾರೊ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಯಾರಿಗೂ ಮೋಸ ಮಾಡಿಲ್ಲ, ಅಂಬರೀಶ್ ಅವರಿಗೆ ಕಾಂಗ್ರೆಸ್ ಏನು ಕೊಡುಗೆ ಕೊಟ್ಟಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ, ಕಾಂಗ್ರೆಸ್ ಗೆ ಬಹಳಷ್ಟು ಜನ ಮೋಸ, ವಂಚನೆ ಮಾಡಿದ್ದಾರೆ, ಬೆನ್ನಿಗೆ ಚೂರಿ ಹಾಕಿದ್ದಾರೆ ಯಾವತ್ತಿಗೂ ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ