ಹುಬ್ಬಳ್ಳಿ: "ಜೆಡಿಎಸ್ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಹೆಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸಿ.ಪಿ. ಯೋಗೇಶ್ವರ್ಗೆ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಹಾಯ ನಮಗೆ ಬೇಕು. ನಮ್ಮ ಶಕ್ತಿ ಕುಮಾರಸ್ವಾಮಿ ಅವರಿಗೆ ಬೇಕು.
ಕುಮಾರಸ್ವಾಮಿ ಬಂದಿರುವುದರಿಂದ ನಮಗೆ ಲೋಕಸಭೆಯಲ್ಲಿ ಅನುಕೂಲ ಆಗಿದೆ. ಜೆಡಿಎಸ್ಗೆ ನಾವು ಪುನರ್ಜನ್ಮ ಕೊಟ್ಟಿದ್ದೇವೆ. ಎರಡು ಕಡೆಯವರಿಗೂ ಲಾಭ ಆಗಿದೆ. ಉಪಚುನಾವಣೆಯಲ್ಲಿ ಟಿಕೆಟ್ನ್ನು ನಮ್ಮ ಪಕ್ಷದ ಕಾರ್ಯಕರ್ತರಿಗೆ ಕೊಡಬೇಕು ಅನ್ನೋದು ಮುಖ್ಯ. ಹೆಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ತ್ಯಾಗ ಮಾಡಬೇಕು ಎಂದು ಮನವಿ ಮಾಡುತ್ತೇವೆ" ಎಂದರು.
"ಒಂದು ಕಪ್ಪು ಚುಕ್ಕೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅವರು ಈಗ ಮುಡಾ ಹಗರಣ ಯಾಕೆ ಮಾಡಿದ್ರು? ಆವಾಗಲೇ ಕೊಟ್ಟಿದ್ದರೆ ಮುಗಿದು ಬಿಡುತ್ತಿತ್ತು. ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಟ್ಟು ಮುಕ್ತ ಆಗಬೇಕು" ಎಂದು ಆಗ್ರಹಿಸಿದರು.