ಬೇಕಾಗುವ ಸಾಮಾಗ್ರಿಗಳು
ನೆನೆಸಿದ ಅಕ್ಕಿ -೩ ಕಪ್
ತೆಂಗಿನಕಾಯಿ ತುರಿ-೧ ಕಪ್
ರುಚಿಗೆ ತಕ್ಕ ಉಪ್ಪು.
ಮಾಡುವ ವಿಧಾನ
ನೆನೆಸಿದ ಅಕ್ಕಿ ಮತ್ತು ತೆಂಗಿನ ಕಾಯಿ ತುರಿಯನ್ನು ನುಣ್ಣಗೆ ರುಬ್ಬಿ ನಂತರ ಅದನ್ನು ಪಾತ್ರೆಗೆ ಹಾಕಿ ಹಿಟ್ಟಿಗೆ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ. ಈ ಹಿಟ್ಟು ನೀರು-ನೀರಾಗಿರಬೇಕು ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿಬೇಕು. ನಂತರ ತವಾವನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ ಒಂದು ನಿಮಿಷ ಬೇಯಿಸಿದರೆ ರುಚಿಕರವಾದ ನೀರು ದೋಸೆ ಸವಿಯಲು ಸಿದ್ದ.
ಜೀರಿಗೆ ರಸಂ
ಬೇಕಾಗುವ ಪದಾರ್ಥಗಳು :
ಜೀರಿಗೆ-೧/೪ಕಪ್
ಕಾಳು ಮೆಣಸು-೧/೪ ಕಪ್,
ಕೊತ್ತಂಬರಿ-೧ ೧/೨ಕಪ್
ತೊಗರಿಬೇಳೆ-೨ಚಮಚ
ಬ್ಯಾಡಗಿ ಮೆಣಸಿನಕಾಯಿ-೨
ಕರಿಬೇವು-೨-೫ ಎಲೆ
ಇಂಗು-ಸ್ವಲ್ಪ
ಹುಣಸೆ ರಸ-೧/೪ ಕಪ್
ಉಪ್ಪು-ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಎಲ್ಲ ಸಾಮಗ್ರಿಗಳನ್ನೂ ಬೇರೆ ಬೇರೆಯಾಗಿ ಮಂದ ಉರಿಯಲ್ಲಿ ಘಮ್ ಎನ್ನುವವರೆಗೂ ಹುರಿದಿಟ್ಟುಕೊಳ್ಳಬೇಕು. ಅದು ಆರಿದ ಮೇಲೆ ನುಣ್ಣಗೆ ಪುಡಿ ಮಾಡಿ. ಒಂದು ಪಾತ್ರೆಯಲ್ಲಿ ಒಂದು ಲೋಟ ನೀರಿನ ಅಳತೆಗೆ ಒಂದು ಚಮಚದಷ್ಟು ಜೀರಿಗೆ ಮೆಣಸಿನ ರಸಂ ಪುಡಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ಹುಣಸೆ ರಸ ಸೇರಿಸಿ ಕುದಿಸಿದರೆ ರುಚಿಯಾದ ಮತ್ತು ಆರೊಗ್ಯಕರ ಜೀರಿಗೆ ರಸಂ ಸವಿಯಲು ಸಿದ್ದ.