image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಯುದ್ಧ ವಿಮಾನವನ್ನು ಚಲಾಯಿಸಿದ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾದ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ...

ಯುದ್ಧ ವಿಮಾನವನ್ನು ಚಲಾಯಿಸಿದ ಭಾರತದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾದ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ...

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಇಂದು ಎಲ್ಲಾ ಸ್ಥರಗಳಲ್ಲೂ ಕೆಲಸ ಮಾಡಿ ತಾನು ಯಾವ ಗಂಡಿಗೂ ಕಡಿಮೆ ಇಲ್ಲ ಎನ್ನುವುದನ್ನು ಈ ಜಗತ್ತಿಗೆ ಸಾರಿ ತೋರಿಸಿದ್ದಾಳೆ. ಅದರಲ್ಲಿ ಗಂಡಸರಿಗೇ ಕಷ್ಟ ಎನಿಸುವ ಯುದ್ದ ವಿಮಾನವನ್ನೇ ಚಲಾಯಿಸಿ ಅದೆಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗುತ್ತಿದ್ದಾಳೆ. ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ ಯುದ್ಧ ವಿಮಾನವನ್ನು ಚಲಾಯಿಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವಕ್ಕೆ ಪಾತ್ರರಾದ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ. ಇವರು 27 ಅಕ್ಟೋಬರ್ 1993 ಜನಿಸಿದರು. ಅವರ ತಂದೆ ದಿನಾರ್ ಚತುರ್ವೇದಿ, ಎಂ.ಪಿ.ಯ ಜಲ ಸಂಪನ್ಮೂಲ ಇಲಾಖೆಯಲ್ಲಿ ಅಧೀಕ್ಷಕ ಎಂಜಿನಿಯರ್. ಅವಳ ತಾಯಿ ಗ್ರಹಿಣಿಯಾಗಿದ್ದರು. ಅವನಿಯ ಅಣ್ಣ ಕೂಡ ಸೇನೆಯಲ್ಲಿ ಅಧಿಕಾರಿ. ಅವರು ಮಧ್ಯಪ್ರದೇಶದ ಶಹ್ದೋಲ್ ಜಿಲ್ಲೆಯ ಡಿಯೋಲೊಂಡ್ ಎಂಬ ಸಣ್ಣ ಪಟ್ಟಣದಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವನಿಯವರಿಗೆ ಚೆಸ್, ಟೇಬಲ್ ಟೆನಿಸ್ ಆಡುವುದರ ಜೊತೆಗೆ ಪೇಂಟಿಂಗ್ ಮಾಡುವುದೆಂದರೆ ತುಂಬಾ ಇಷ್ಟ ಇತ್ತು. ಆದರೆ ತನ್ನ ಹಿರಿ ಸೋದರನಿಂದ ಸ್ಫೂರ್ತಿ ಪಡೆದ ಅವನಿ ತನ್ನ ಕಾಲೇಜು ಬನಸ್ಥಾಲಿ ವಿಶ್ವವಿದ್ಯಾಲಯದ ಫ್ಲೈಯಿಂಗ್ ಕ್ಲಬ್‌ನಲ್ಲಿ ಕೆಲವು ಗಂಟೆಗಳ ಹಾರಾಟದ ಅನುಭವವನ್ನು ಪಡೆದಿದ್ದರು. ಇದು ಅವರನ್ನು ಐಎಎಫ್‌ಗೆ ಸೇರಲು ಪ್ರೇರೇಪಿಸುವುದಕ್ಕೆ ಸಹಕಾರಿಯಾಯಿತು. ಅವನಿ ಚತುರ್ವೇದಿ ಅವರು ತಮ್ಮ 25ನೇ ವಯಸ್ಸಿನಲ್ಲಿ ಹೈದರಾಬಾದ್ ವಾಯುಪಡೆಯ ಅಕಾಡೆಮಿಯಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದರು. 2014 ರಲ್ಲಿ ರಾಜಸ್ಥಾನದ ಬನಸ್ಥಾಲಿ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ ಅವರು ಎಎಫ್‌ಸಿಎಟಿ ಉತ್ತೀರ್ಣರಾದರು.  ಮೋಹನ ಸಿಂಗ್, ಭಾವನಾಕಾಂತ್ ಮತ್ತು ಅವನಿಯವರು ಜೂನ್2016 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರನ್‌ಗೆ ಸೇರಿದರು. ಅವರನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು 18 ಜೂನ್ 2016 ರಂದು ದೇಶಕ್ಕೆ ಸೇವೆ ಸಲ್ಲಿಸಲು ನಿಯೋಜಿಸಿದರು. ಹೈದರಾಬಾದ್ ದುಂಡಿಗಲ್ ನಲ್ಲಿರುವ ಏರ್ ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಜೂನ್ 2016ರಲ್ಲಿ ಫೈಟರ್ ಪೈಲಟ್ ಆಗಿದ್ದರು. ನಂತರ ಕರ್ನಾಟಕದ ಪಕ್ಕದಲ್ಲಿರುವ ಬೀದರ್‌ನಲ್ಲಿ 3ನೇ ಹಂತದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಫೈಟರ್ ಜೆಟ್‌ಗಳಂತೆ ಹಾರಲು ಸಾಧ್ಯವಾಯಿತು. ಸುಖೋಯ್ ಮತ್ತು ತೇಜಸ್‌ನ್ನು 2018 ರಲ್ಲಿ, ಅವನಿ ಚತುರ್ವೇದಿ ಗುಜರಾತ್‌ನ ಜಮ್‌ನ ಗರದಿಂದ ಎಮ್‌ಐಜಿ-21 ಬೈಸನ್‌ನಿಂದ ವಿಮಾನವೇರಿ ಹಾರಾಟ ಶುರು ಮಾಡಿದಲ್ಲದೇ ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದ್ದಾರೆ. ಈ ಮೂಲಕ ಅವನಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. 2018 ರಲ್ಲಿ ಅವನಿಯನ್ನು ಫ್ಲೈಟ್ ಲೆಫ್ಟಿನೆಂಟ್ ಹುದ್ದೆಗೆ ಬಡ್ತಿ ನೀಡಲಾಯಿತು. 2019ರಲ್ಲಿ ಪ್ಲೈಟ್ ಲೆಫ್ಟಿನೆಂಟ್ ವಿನೀತ್ ಚಿಕಾರರನ್ನು ಮದುವೆಯಾದರು. 2020ರ ಮಾರ್ಚ್ 9ರಂದು ಅವನಿಯವರಿಗೆ ರಾಷ್ಟ್ರಪತಿ ತಾಮಾನಾಥ್ ಕೋವಿಂದ್ ಅವರು ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇಂತಹ ಮಹಾನ್ ಸಾಧಕಿಗೆ ಕರಾವಳಿ ತರಂಗಿಣಿ ಶುಭ ಹಾರೈಸುತ್ತಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ