ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಈ ನಾಡಿನ ಒಳಿತಿಗಾಗಿ ಕೂಡ ಹೋರಾಡಬಲ್ಲಳು ಎಂದು ಅದೆಷ್ಟೋ ಬಾರಿ ಸಾಬೀತು ಪಡಿಸಿದ್ದಾರೆ. ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇವತ್ತಿನ ವಿಶೇಷ ಅತಿಥಿ ಸ್ವಾತಂತ್ರ ಸಂಗ್ರಾಮದಲ್ಲಿ ಭಗತ್ ಸಿಂಗರ ಒಡನಾಡಿ “ದುರ್ಗಾ ಬಾಭಿ” ದುರ್ಗಾವತಿ ದೇವಿಯವರು 7 ಅಕ್ಟೋಬರ್ 1907ರಂದು ಅಲಹಾಬಾದ್‌ನಲ್ಲಿ ಗುಜರಾತಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು. ಆಳುವ ಬ್ರಿಟಿಷ್ ರಾಜ್ ವಿರುದ್ಧ ಸಶಸ್ತ್ರ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಕೆಲವೇ ಮಹಿಳಾ ಕ್ರಾಂತಿಕಾರಿಗಳಲ್ಲಿ ಇವರೂ ಒಬ್ಬರು. ಅವರು ಇನ್ನೊಬ್ಬ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸದಸ್ಯರಾದ ಭಗವತಿ ಚರಣ್ ವೋಹ್ರಾ ಅವರ ಪತ್ನಿಯಾಗಿದ್ದರು. 16 ನವೆಂಬರ್ 1926 ರಂದು ಲಾಹೋರ್‌ನಲ್ಲಿ ಕರ್ತಾರ್ ಸಿಂಗ್ ಸರಭಾ ಅವರ ಹುತಾತ್ಮತೆಯ 11 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಭೆ ನಿರ್ಧರಿಸಿದಾಗ ದೇವಿ ಮುಖ್ಯವಾಹಿನಿಗೆ ಬಂದರು. 1929ರ ಅಸೆಂಬ್ಲಿ ಬಾಂಬ್ ಎಸೆದ ಘಟನೆಗಾಗಿ ಭಗತ್ ಸಿಂಗ್ ಶರಣಾದ ನಂತರ, ದೇವಿ ಲಾರ್ಡ್ ಹೈಲಿಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದರು. ಆದರೆ ಅವನು ತಪ್ಪಿಸಿಕೊಂಡಿದ್ದನು. ಆಗ ಆಕೆ ಪೊಲೀಸರಿಗೆ ಸಿಕ್ಕಿಬಿದ್ದು ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಭಗತ್ ಸಿಂಗ್ ಅವರು ಜಾನ್ ಪಿ. ಸೌಂಡರ್ಸ್ ಅವರನ್ನು ಕೊಂದ ಎರಡು ದಿನಗಳ ನಂತರ, 19 ಡಿಸೆಂಬರ್ 1928 ರಂದು, ಸುಖದೇವ್ ಥಾಪರ್ ಅವರು ಸಹಾಯಕ್ಕಾಗಿ ದುರ್ಗಾ ಬಾಬಿಯನ್ನು ಕರೆದಾಗ ಅದನ್ನು ಒಪ್ಪಿದರು. ಮರುದಿನ ಮುಂಜಾನೆ ಹೌರಾ ಮಾರ್ಗವಾಗಿ ಲಾಹೋರ್‌ನಿಂದ ಬಟಿಂಡಾಗೆ ಹೊರಡುವ ರೈಲನ್ನು ಹಿಡಿಯಲು ಅವರು ನಿರ್ಧರಿಸಿದರು. 16 ಡಿಸೆಂಬರ್ 1928ರ ರಾತ್ರಿ ಸುಖದೇವ್ ಅವರ ಮನೆಗೆ ಬಂದಾಗ, ಸುಖದೇವ್ ಸಿಂಗ್ ಅವರು ಹೊಸ ಸ್ನೇಹಿತ ಎಂದು ಪರಿಚಯಿಸಿದರು. ದೇವಿಗೆ ಸಿಂಗ್‌ನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಕಾರಣ ಸಿಂಗ್ ಗಡ್ಡವನ್ನು ಬೋಳಿಸಿಕೊಂಡು, ಕೂದಲನ್ನು ಚಿಕ್ಕದಾಗಿ ಕತ್ತರಿಸಿ ಪಾಶ್ಚಿಮಾತ್ಯ ಉಡುಗೆಯನ್ನು ಧರಿಸಿದ್ದರು. ದೇವಿಯು ಭಗತ್ ಸಿಂಗ್‌ನನ್ನು ಚೆನ್ನಾಗಿ ತಿಳಿದಿದ್ದರೂ ಅವರ ಬದಲಾದ ಕ್ಲೀನ್-ಶೇವ್ಡ್ ನೋಟದಿಂದಾಗಿ ಗುರುತಿಸಲು ಸಾಧ್ಯವಾಗದಿದ್ದರೆ, ಗಡ್ಡಧಾರಿ ಸಿಖ್‌ಗಾಗಿ ಹುಡುಕುತ್ತಿರುವ ಪೋಲೀಸರು ಅವನನ್ನು ಗುರುತಿಸುವುದಿಲ್ಲ ಎಂದು ಹೇಳಿದರಂತೆ. ಮರುದಿನ ಮುಂಜಾನೆ ಅವರು ಮನೆಯಿಂದ ಹೊರಟು ನಿಲ್ದಾಣದಲ್ಲಿ, ಸಿಂಗ್ ಕಾನ್‌ಪೂರ್‌ಗೆ ಮೂರು ಟಿಕೆಟ್‌ಗಳನ್ನು ಖರೀದಿಸಿದ್ದರು. ಹೌರಾ ರೈಲ್ವೇ ನಿಲ್ದಾಣದಲ್ಲಿ ಸಿಐಡಿ ಸಾಮಾನ್ಯವಾಗಿ ಲಾಹೋರ್ ನಿಂದ ನೇರ ರೈಲಿನಲ್ಲಿ ಪ್ರಯಾಣಿಕರನ್ನು ಕೂಲಂಕಷವಾಗಿ ಪರಿಶೀಲಿಸುವುದರಿಂದ ಅವರು ಕಾನ್‌ಪೂರ್‌ನಲ್ಲಿ ಪ್ರಯಾಣವನ್ನು ಮುರಿದು ಲಕ್ನೋಗೆ ರೈಲು ಹತ್ತಿದರು. ಲಕ್ನೋದಲ್ಲಿ ರಾಜಗುರು ಪ್ರತ್ಯೇಕವಾಗಿ ಬನಾರಾಸ್‌ಗೆ ಹೊರಟರೆ ಭಗತ್ ಸಿಂಗ್, ಬಾಭಿ ಮತ್ತು ಬಾಬಿಯ ಮಗು ಹೌರಾಕ್ಕೆ ಹೋದರು. ಕೆಲವು ದಿನಗಳ ನಂತರ ದೇವಿ ತನ್ನ ಮಗುವಿನೊಂದಿಗೆ ಲಾಹೋರ್‌ಗೆ ಹಿಂದಿರುಗುತ್ತಾರೆ. ಇತರ ಸ್ವಾತಂತ್ರ‍್ಯ ಹೋರಾಟಗಾರರಿಗಿಂತ ಭಿನ್ನವಾಗಿ ಕೆಲಸ ಮಾಡಿದ್ದ ಇವರು, ಭಾರತೀಯ ಸ್ವಾತಂತ್ರ‍್ಯದ ನಂತರ ಗಾಜಿಯಾಬಾದ್‌ನಲ್ಲಿ ಸಾಮಾನ್ಯ ಪ್ರಜೆಯಾಗಿ ವಾಸಿಸಲು ಪ್ರಾರಂಭಿಸಿ, ನಂತರ ಅವರು ಲಕ್ನೋದಲ್ಲಿ ಬಡ ಮಕ್ಕಳಿಗಾಗಿ ಶಾಲೆಯನ್ನು ತೆರೆದರು. ದೇವಿಯವರು 92 ನೇ ವಯಸ್ಸಿನಲ್ಲಿ 15 ಅಕ್ಟೋಬರ್ 1999 ರಂದು ಗಾಜಿಯಾಬಾದ್‌ನಲ್ಲಿ ನಿಧನರಾದರು. ಇಂತಹ ಮಹಾನ್ ಮಹಿಳೆಗೆ ಕರಾವಳಿ ತರಂಗಿಣಿ ನಮಿಸುತಿದೆ.
✍ ಲಲಿತಶ್ರೀ ಪ್ರೀತಂ ರೈ