image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಗ್ ಬ್ಯಾಷ್‌ನಲ್ಲಿ ಆಡಿದ ಭಾರತದ ಮೂರನೇ ಮಹಿಳಾ ಕ್ರಿಕೆಟಿಗರಾದ ವೇದಾ ಕೃಷ್ಣಮೂರ್ತಿ....

ಬಿಗ್ ಬ್ಯಾಷ್‌ನಲ್ಲಿ ಆಡಿದ ಭಾರತದ ಮೂರನೇ ಮಹಿಳಾ ಕ್ರಿಕೆಟಿಗರಾದ ವೇದಾ ಕೃಷ್ಣಮೂರ್ತಿ....

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಈ ಸಮಾಜದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ತುಳಿತಕ್ಕೆ ಒಳಗಾಗುತ್ತಾ ಬಂದಿದ್ದಾಳೆ ಎನ್ನುವುದು ಜಗಜ್ಜಾಹಿರಾದ ಸತ್ಯ. ಹಾಗಂತ ಹೆಣ್ಣಿಗೆ ಈ ಸಮಾಜದಲ್ಲಿ ಸ್ಥಾನ ಇಲ್ಲ ಎಂದರೆ ತಪ್ಪು. ಹೆಣ್ಣು ಮಗಳಾಗಿ, ತಂಗಿಯಾಗಿ, ಅಕ್ಕನಾಗಿ, ಸೊಸೆಯಾಗಿ, ಅಮ್ಮನಾಗಿ, ಅತ್ತೆಯಾಗಿ, ಅಜ್ಜಿಯಾಗಿ ಮುತ್ತಜ್ಜಿಯಾಗಿ ತನ್ನ ಸ್ಥಾನಕ್ಕೆ ನ್ಯಾಯ ಒದಗಿಸುತ್ತಾ ಬಂದಿದ್ದಾಳೆ. ಹೆಣ್ಣು ಸಂಸಾರದ ಕಣ್ಣು. ಅವಳ ನೆರಳಿನಲ್ಲಿ ಬೆಳೆವ ಮಕ್ಕಳು ಎಂದೆಂದಿಗೂ ಮರೆಯಲಾಗದೆ ಬಯಸುವುದು ತನ್ನ ತಾಯಿಯ ಮಡಿಲು. ತಾಯಿಯ ಮಡಿಲನ್ನು ಬಯಸದ ಹೃದಯ ಈ ಜಗದಲ್ಲಿ ಇರಲು ಸಾದ್ಯವಿಲ್ಲ. ತನ್ನ ತಾಯಿಯ ಮಡಿಲನ್ನು ಬಯಸುವ ಗಂಡು ಈ ಸಮಾಜದಲ್ಲಿ ಬೇರೆ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಮಾತ್ರ ಬೇರೆಯದ್ದೇ ಆಗಿರುತ್ತದೆ. ಇಂತಹ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮನೆಯಿಂದ ಹೊರಗೆ ಬಂದು ಸಾದಿಸುವುದು ಕಷ್ಟದ ಕೆಲವಾಗಿತ್ತು. ಅಂತಹ ಸಮಯದಲ್ಲಿಯೂ ಹೆಣ್ಣು ಮಕ್ಕಳು ತಾನು ಯಾವ ಗಂಡಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟು ಇಂದಿನ ಆದುನಿಕ ಯುಗದ ಹೆಣ್ಣು ಮಕ್ಕಳ ಸಾದನೆಗೆ ಹಾದಿಯಾಗಿದ್ದಾರೆ. ಅಂತಹ ಹೆಣ್ಣು ಮಕ್ಕಳಿಂದ ಪ್ರೇರೇಪಿತರಾದ ಅದೆಷ್ಟೋ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ “ವೇದಾ ಕೃಷ್ಣಾಮೂರ್ತಿ”. ಇವರು ಕರ್ನಾಟಕದ ಚಿಕ್ಕಮಗಳೂರಿನ ಕಡೂರಿನಲ್ಲಿ 1992, ಅಕ್ಟೋಬರ್ 19ರಂದು ಹುಟ್ಟಿದರು.

ತನ್ನ 12ನೇ ವಯಸ್ಸಿಗೆ ಕರಾಟೆಯಲ್ಲಿ 2 "ಬ್ಲ್ಯಾಕ್ ಬೆಲ್ಟ್" ಪಡೆದ ಹಿರಿಮೆ ಇವರದ್ದು. ವೇದಾ 12 ವರ್ಷ ವಯಸ್ಸಿನವಳಾಗಿದ್ದಾಗ, ಮಿಥಾಲಿ ರಾಜ್ ಅವರನ್ನು ಇವರ ಶಾಲೆಯಲ್ಲಿ ಸನ್ಮಾನಿಸಲಾಯಿತು. ಇದರ ನಂತರ ಮಿಥಾಲಿ ರಾಜ್ ಅವರು ವೇದಾರವರ ಆದರ್ಶರಾದರು. ಅಲ್ಲಿಂದ ವೇದರವರ ಕ್ರಿಕೇಟ್ ಬದುಕು ಶುರುವಾಗಿ, 2005ರಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ನಲ್ಲಿ ತಮ್ಮ ಔಪಚಾರಿಕ ಕ್ರಿಕೆಟ್ ತರಬೇತಿ ಪ್ರಾರಂಭಿಸಿದರು. ಕ್ರಿಕೆಟ್ ಕ್ಷೇತ್ರದಲ್ಲಿ ಸಾದನೆ ಮಾಡಬೇಕೆಂಬ ಮಗಳ ಕನಸನ್ನು ನನಸಾಗಿಸಲು, ವೇದಾ ಅವರ ತಂದೆ ಚಿಕ್ಕಮಗಳೂರಿನಿಂದ ಬೆಂಗಳೂರಿನಲ್ಲಿ ಕುಟುಂಬದೊಡನೆ ನೆಲೆಸಿದರು. ತರಬೇತಿಯ ಜೊತೆಗೆ ಕುಟುಂಬದ ಒತ್ತಾಸೆಯಿಂದ ನವೆಂಬರ್ 2015ರಲ್ಲಿ, ಅವರ ಹೆಸರು ಬಿ-ಗ್ರೇಡ್ ಒಪ್ಪಂದದ ಪಟ್ಟಿಯಲ್ಲಿ ಸೇರಿತು. ಇದು ಮೊದಲ ಬಾರಿಗೆ ಬಿಸಿಸಿಐ ಮಹಿಳಾ ಆಟಗಾರರಿಗೆ ಒಪ್ಪಂದಗಳನ್ನು ನೀಡಿತು. ಬಲಗೈ-ಬ್ಯಾಟ್ಸ್ ಮನ್ ಮತ್ತು ಎಡಗೈ ಬೌಲರ್ ಆದ ಇವರು ಮುಂದೆ ಇಂಗ್ಲೆಂಡಿನ ವಿರುದ್ದ ಅಂತರಾಷ್ಟ್ರಿಯ ಮಹಿಳಾ ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದರು.

2017ರ "ಮಹಿಳಾ ಕ್ರಿಕೆಟ್ ವಿಶ್ವಕಪ್" ಫೈನಲ್ ತಲುಪಿದ ಭಾರತ ತಂಡದ ಸದಸ್ಯರಾಗಿದ್ದರು. ಅವರು ಬಿಗ್ ಬ್ಯಾಷ್‌ನಲ್ಲಿ ಆಡುವ ಭಾರತದ ಮೂರನೇ ಮಹಿಳಾ ಕ್ರಿಕೆಟಿಗರು. ಫೆಬ್ರವರಿ 2018ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್‌ಗಳನ್ನು ಗಳಿಸಿದ ಭಾರತದ ಕಿರಿಯ ಮಹಿಳಾ ಆಟಗಾರ್ತಿಯೂ ಇವರೇ ಆಗಿದ್ದಾರೆ. ಆದರೆ ಜಗತ್ತನ್ನು ಕಾಡಿದ ಮಹಾಮಾರಿ ಕೋವಿಡ್ 19 ನಿಗೆ ಒಂದೇ ವಾರದಲ್ಲಿ ತನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡು ನೋವಿನ ಪ್ರಪಾತಕ್ಕೆ ತಳ್ಳಲ್ಪಟ್ಟ ಇವರು ಈಗ ಆ ನೋವನ್ನು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರ ಮನಸ್ಸಿನ ನೋವು ಅಳಿಸಿ ಹೋಗಿ ಅವರ ಸಾದನೆಯ ಹಾದಿಯ ಕನಸುಗಳು ಕೈ ಕೂಡಲಿ ಎನ್ನುವುದು ಕರಾವಳಿ ತರಂಗಿಣಿಯ ಶುಭ ಹಾರೈಕೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ