image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಮೊದಲ ಮಹಿಳಾ ಸರ್ಜನ್ ಜನರಲ್ ಮೇರಿ ಪೊನೆನ್ ಲುಕೋಸ್.....

ಭಾರತದ ಮೊದಲ ಮಹಿಳಾ ಸರ್ಜನ್ ಜನರಲ್ ಮೇರಿ ಪೊನೆನ್ ಲುಕೋಸ್.....

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು, ಜೀವನದ ಹಾದಿಯಲ್ಲಿ ಹಲವಾರು ಸಾಧನೆಗಳನ್ನು ಮಾಡಿ ಜಗತ್ತಿನ ಅದೆಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ ಭಾರತದ ಮೊದಲ ಮಹಿಳಾ ಸರ್ಜನ್ ಜನರಲ್, ಸ್ತ್ರೀರೋಗತಜ್ಙೆ, ಪ್ರಸೂತಿ ತಜ್ಙೆ ಮೇರಿ ಪೂನೆನ್ ಲುಕೋಸ್  (merry ponen looks). ಮೇರಿ  ಪೂನೆನ್ ಲುಕೋಸ್ ಶ್ರೀಮಂತ ಆಂಗ್ಲಿಕನ್ ಸಿರಿಯನ್ ಕ್ರಿಶ್ಚಿಯನ್ ಕುಟುಂಬಕ್ಕೆ ಏಕೈಕ ಮಗುವಾಗಿ ಆಗಸ್ಟ್ 1886 ರಂದು ಐಮನಮ್‌ನಲ್ಲಿ ಜನಿಸಿದರು. ಇವರ ತಂದೆ ಟಿ.ಇ ಪೂನೆನ್ ರಾಜಪ್ರಭುತ್ವದ ತಿರುವಾಂಕೂರ್ ರಾಜ್ಯದಲ್ಲಿ ವೈದ್ಯಕೀಯ ವೈದ್ಯರಾಗಿದ್ದರು. ಅಷ್ಟೇ ಅಲ್ಲದೆ ತಿರುವಾಂಕೂರ್‌ನಲ್ಲಿ ಮೊದಲ ವೈದ್ಯಕೀಯ ಪದವೀಧರರಾಗಿದ್ದರು ಹಾಗೂ ತಿರುವಾಂಕೂರ್ ರಾಜ್ಯದ ರಾಯಲ್ ವೈದ್ಯರಾಗಿದ್ದರು. ಮೇರಿ ತಿರುವನಂತಪುರಂನ ಹೋಲಿ ಏಂಜಲ್ಸ್ ಕಾನ್ವೆಂಟ್ ಹೈಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ಆದಾಗ್ಯೂ, ಅವರು ಮಹಿಳೆ ಎಂಬ ಕಾರಣಕ್ಕಾಗಿ ತಿರುವನಂತಪುರಂ ನ ಮಹಾರಾಜಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯಗಳಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಮುಂದೆ ಅವರು 1909 ರಲ್ಲಿ ಕಾಲೇಜಿನ ಏಕೈಕ ವಿದ್ಯಾರ್ಥಿನಿಯಾಗಿ ಪದವಿ ಪಡೆದು ಇತಿಹಾಸದಲ್ಲಿ ಅಧ್ಯಯನ ಮಾಡಬೇಕಾಯಿತು. ಮಹಾರಾಜಾಸ್ ಕಾಲೇಜು ಸಂಯೋಜಿತವಾಗಿರುವ ಮದ್ರಾಸ್ ವಿಶ್ವವಿದ್ಯಾಲಯದ ಮೊದಲ ಮಹಿಳಾ ಪದವಿ. ಭಾರತೀಯ ವಿಶ್ವವಿದ್ಯಾನಿಲಯಗಳು ಮಹಿಳೆಯರಿಗೆ ವೈದ್ಯಕೀಯ ಪ್ರವೇಶವನ್ನು ನೀಡದ ಕಾರಣ, ಅವರು ಲಂಡನ್‌ಗೆ ತೆರಳಿ, ಲಂಡನ್ ವಿಶ್ವವಿದ್ಯಾಲಯದಿಂದ MBBS ಪದವಿ ಪಡೆದರು. ಅವರು ಕೇರಳದಿಂದ ವೈದ್ಯಕೀಯದಲ್ಲಿ ಪದವಿ ಪಡೆದ ಮೊದಲ ಮಹಿಳೆಯಾದರು. ಡಬ್ಲಿನ್‌ನ ರೊಟುಂಡಾ ಆಸ್ಪತ್ರೆಯಿಂದ ವಿದ್ಯೆ ಪಡೆಯಲು USA ಗೆ ಪಯಣ ಬೆಳೆಸಿದರು. ಮುಂದೆ ಗ್ರೇಟ್ ಓರ್ಮಂಡ್ ಸ್ಟ್ರೀಟ್ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ಸ್ನಲ್ಲಿ ಸುಧಾರಿತ ತರಬೇತಿಯನ್ನು ಪಡೆದರು. ನಂತರ ಅವರು USAಯ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರು. ಮೇರಿ 1914ರಲ್ಲಿ ಭಾರತಕ್ಕೆ ಮರಳಿದರು. ತಿರುವನಂತಪುರದ ಥೈಕಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಹುದ್ದೆಯನ್ನು ಪಡೆದು ಆಸ್ಪತ್ರೆಯ ಅಧೀಕ್ಷಕರಾಗಿ ಕೆಲಸ ಮಾಡಿದರು. ಅವರು ಕುರಿವಿಲ್ಲಾ ಲೂಕೋಸ್ ಅವರನ್ನು ವಿವಾಹವಾದರು. 1922 ರಲ್ಲಿ ಅವರು ಶ್ರೀ ಚಿತ್ರಾ ಸ್ಟೇಟ್ ಕೌನ್ಸಿಲ್ ಎಂದು ಕರೆಯಲ್ಪಡುವ ತಿರುವಾಂಕೂರಿನ ಶಾಸಕಾಂಗ ಸಭೆಗೆ ನಾಮನಿರ್ದೇಶನಗೊಳ್ಳುವ  ಮೂಲಕ ರಾಜ್ಯದ ಮೊದಲ ಮಹಿಳಾ ಶಾಸಕರಾದರು. ಎರಡು ವರ್ಷಗಳ ನಂತರ, ಅವರು ತಿರುವಾಂಕೂರ್ ರಾಜ್ಯದ ಆಕ್ಟಿಂಗ್ ಸರ್ಜನ್ ಜನರಲ್ ಆಗಿ ಬಡ್ತಿ ಪಡೆದರು. ಇವರು ಭಾರತದಲ್ಲಿ ಸರ್ಜನ್ ಜನರಲ್ ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ. ಆಸ್ಪತ್ರೆಯಲ್ಲಿ 1936 ರವರೆಗೆ ಮುಂದುವರೆದರು. 1938ರಲ್ಲಿ ಅವರು 32 ಸರ್ಕಾರಿ ಆಸ್ಪತ್ರೆಗಳು, 40 ಸರ್ಕಾರಿ ಔಷಧಾಲಯಗಳು ಮತ್ತು 20 ಖಾಸಗಿ ಸಂಸ್ಥೆಗಳ ಉಸ್ತುವಾರಿ ಸರ್ಜನ್ ಜನರಲ್ ಆದರು. ಅವರು ವಿಶ್ವದಲ್ಲಿ ಸರ್ಜನ್ ಜನರಲ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎಂದು ವರದಿಯಾಗಿದೆ. ಮೇರಿಯವರು ತಿರುವಾಂಕೂರಿನ ಕೊನೆಯ ಮಹಾರಾಜರಾದ ಚಿತ್ತಿರ ತಿರುನಾಳ್ ಬಲರಾಮ ವರ್ಮರಿಂದ ವೈದ್ಯಶಾಸ್ತ್ರಕುಸಲ ಎಂಬ ಬಿರುದನ್ನು ಪಡೆದಿದ್ದಾರೆ. ಭಾರತ ಸರ್ಕಾರವು 1975ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಅವರು 2 ಅಕ್ಟೋಬರ್ 1976 ರಂದು ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾದರು.ಇವರಿಗೆ ಕರಾವಳಿ ತರಂಗಿಣಿ ನಮಿಸುತ್ತಿದೆ.

✍ ಲಲಿತಶ್ರೀ ಪ್ರೀತಂ ರೈ

 

Category
ಕರಾವಳಿ ತರಂಗಿಣಿ