ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವವಳು ಹೆಣ್ಣು, ಈಗ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯು ತ್ತಿರುವುದರ ಪರಿಣಾಮವಾಗಿ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಸ್ವಾತಂತ್ಯ ಪೂರ್ವದಲ್ಲಿ ಮಹಿಳೆಯ ಪರಿಸ್ಥಿತಿ ಹಾಗೆ ಇರಲಿಲ್ಲ. ಆರ್ಥಿಕವಾಗಿ ಸಬಲವಾಗಿದ್ದ ಕುಟುಂಬಗಳಲ್ಲಿ ಮಾತ್ರ ಹೆಣ್ಣಿಗೆ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಇರುತ್ತಿತ್ತು. ಅಂತಹ ಸಮಯದಲ್ಲಿಯೂ ಸ್ವಾತಂತ್ರ ಸಂಗ್ರಾಮದಲ್ಲಿ ಜಾತಿ ದರ್ಮದ ಹಂಗಿಲ್ಲದೆ ಹೋರಾಡಿದ ವೀರ ಮನಿತೆಯರ ಬಗ್ಗೆ ನಾವು ಕೇಳಿದ್ದೇವೆ. ಅಂತಹ ವೀರ ನಾರಿಯರಲ್ಲಿ ಅರುಣಾ ಅಸಫ್ ಅಲಿ ಒಬ್ಬರು. ಅರುಣಾ ಅಸಫ್ ಅಲಿ ಯವರು ಜುಲೈ 16, 1906 ರಂದು ಕಲ್ಕಾ, ಪಂಜಾಬ್, ಇಂದಿನ ಹರ್ಯಾಣದ ಸಂಪ್ರದಾಯಸ್ಥ ಬೆಂಗಾಲಿ ಕುಟುಂಬದಲ್ಲಿ ಜನಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇವರು ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಹೋರಾಡಿದ ದಿಟ್ಟ ಮಹಿಳೆ. 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮುಂಬೈಯ ಗೌವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಡೆಯುತ್ತಿದ್ದ ಸಭೆ 144ನೇ ವಿದಿಯ ಪ್ರಕಾರ ಕಾನೂನು ಬಾಹಿರ ಎಂದು ಸಾರಲ್ಪಟ್ಟಿತ್ತು. ಆಗ ಒಬ್ಬ ಬ್ರಿಟೀಷ್ ಅಧಿಕಾರಿ ಎರಡು ನಿಮಿಷದಲ್ಲಿ ಅಲ್ಲಿ ನೆರೆದಿದ್ದ ಜನರು ಚದುರಿ ಹೋಗುವಂತೆ ಆದೇಶಿಸುತ್ತಾನೆ, ಜನ ಚದುರಲು ಶುರುವಾಗುತ್ತಿದ್ದಂತೆ ವೇದಿಕೆಯ ಕಡೆ ಓಡಿದ ಅರುಣಾ ಧ್ವಜವನ್ನು ಹಾರಿಸಿಯೇ ಬಿಟ್ಟಿದ್ದರು. ನಂತರ ಬಂದನದ ಬೀತಿಯಿಂದ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ಅವರನ್ನು ಹಿಡಿದುಕೊಟ್ಟವರಿಗೆ ಬ್ರಿಟೀಷ್ ಸರಕಾರವು 500 ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಮುಂದೆ ಗಾಂದಿಜಿಯವರ ಸಲಹೆಯ ಮೇರೆಗೆ ಅರುಣಾರವರು ಶರಣಾದರು. ಅಷ್ಟರಲ್ಲಿ ಅವರ ಬಂದನದ ಆಜ್ಞೆಯನ್ನು ರದ್ದು ಪಡಿಸಲಾಗಿತ್ತು. ಅಲಹಾಬಾದ್‌ನ ಸಭೆಯೊಂದರಲ್ಲಿ ಸ್ವಾತಂತ್ರ ಹೋರಾಟಗಾರ ಅಸಫ್ ಅಲಿಯವರ ಭಾಷಣದಿಂದ ಪ್ರಭಾವಿತರಾಗಿದ್ದ ಅರುಣಾ ತನಗಿಂತ 20 ವರುಷ ಹಿರಿಯರಾದ ಅಸಫ್ ಅಲಿಯವರನ್ನು ಎರಡೂ ಕಟುಂಬದವರ ವಿರೋಧದ ನಡುವೆಯೂ ಮದುವೆಯಾದರು. ಅಸಫ್ ಅಲಿ ಒಬ್ಬ ಭಾರತೀಯ ಸ್ವಾತಂತ್ರ‍್ಯ ಹೋರಾಟಗಾರ ಮತ್ತು ಭಾರತೀಯ ವಕೀಲರಾಗಿದ್ದರು. ಅವರು ಭಾರತದಿಂದ ಯುನೈಟೆಡ್ ಸ್ಟೇಟ್‌ಗೆ ಮೊದಲ ರಾಯಭಾರಿಯಾದವರು. ಮುಂದೆ ಒಡಿಶಾದ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದರು. ಗಂಡ ಹೆಂಡತಿ ಇಬ್ಬರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರೀಯರಾಗಿದ್ದರೂ ಕೂಡ ಅರುಣಾ ತನ್ನ ಅತಿ ಹೆಚ್ಚು ಸಮಯವನ್ನು ಈ ಸಂಗ್ರಾಮಕ್ಕಾಗಿ ಮುಡಿಪಾಗಿಟ್ಟಿದ್ದರು. ಸ್ವಾತಂತ್ರಾನಂತರ ರಾಜಕೀಯ ಪ್ರವೇಶಿಸಿದರು. 1954ರಲ್ಲಿ ಮಹಿಳಾ ಒಕ್ಕೂಟವನ್ನು ಸ್ಥಾಪಿಸಿದರು. 1958ರಲ್ಲಿ ದೆಹಲಿಯ ಮೊದಲ ಮೇಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1960ರಲ್ಲಿ ಮೀಡಿಯಾ ಪಬ್ಲಿಷಿಂಗ್ ಹೌಸ್‌ನ್ನು ಆರಂಭಿಸಿದ್ದರು. 1991 ರಲ್ಲಿ ಪ್ರತಿಷ್ಟಿತ ಅಂತರ್ ರಾಷ್ಟ್ರೀಯ ಲೆನಿನ್ ಶಾಂತಿ ಪ್ರಶಸ್ತಿ, 1992ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ. 1992ರಲ್ಲಿ ನೆಹರು ಪುರಸ್ಕಾರ ನೀಡಿ ಗೌರವಿಸಲಾಯಿತು. 1996ರ ಜುಲೈ 16ರಂದು ನಿಧನರಾದ ಇವರಿಗೆ 1967ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಶಿಕ್ಷಕಿಯೂ ಆಗಿದ್ದ ಅರುಣಾ ಅಸಫ್ ಅಲಿ ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಹೆಮ್ಮೆಯ ಹೋರಾಟಗಾರ್ತಿ ಇವರಿಗೆ ಕರಾವಳಿ ತರಂಗಿಣಿಯು ಶಿರಬಾಗಿ ನಮಿಸುತ್ತಿದೆ.
✍ಲಲಿತಶ್ರೀ ಪ್ರೀತಂ ರೈ