image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೈಟಿಂಗೇಲ್ ಆಫ್ ಇಂಡಿಯಾ ಸರೋಜಿನಿ ನಾಯ್ಡು...

ನೈಟಿಂಗೇಲ್ ಆಫ್ ಇಂಡಿಯಾ ಸರೋಜಿನಿ ನಾಯ್ಡು...

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಜೀವನದ ಹಾದಿಯಲ್ಲಿ ಒಂದಿಲ್ಲೊಂದು ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾ, ತನಗಾಗಿ ಅಲ್ಲದಿದ್ದರೂ ತನ್ನವರಿಗಾಗಿ ಜೀವನವನ್ನು ಮುಡಿಪಾಗಿಟ್ಟವಳು. ಅದೆಷ್ಟೋ ಬಾರಿ ತನಗೆ ಸಂಪತ್ತಿನ‌ ಕೊರತೆ ಇಲ್ಲದಿದ್ದರೂ, ತನ್ನ ಸಾದನೆಯ ಹಾದಿಗೆ ಬರುವ ತೊಡಕುಗಳನ್ನು ಎದುರಿಸಿ ನಿಂತು ಕೆಲಸ ಮಾಡಬೇಕಾಗುತ್ತದೆ. ಹಾಗೇ ಸದಾನೆ‌ಮಾಡಿದ ಹೆಣ್ಣು ಮಕ್ಕಳು ಹಲವಾರು.   ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ “ಭಾರತದ ಕೋಗಿಲೆ” ಎನ್ನುವ ಹೆಸರಿನಿಂದಲೇ ಪ್ರಸಿದ್ಧಿಯಾಗಿರುವ "ಸರೋಜಿನಿ ನಾಯ್ಡು" ಇವರು ಭಾರತದ ಸ್ವಾತಂತ್ರ‍್ಯ ಹೋರಾಟಗಾರರು, ಕವಯತ್ರಿ ಅಷ್ಟೇ ಅಲ್ಲದೆ ಇವರು ರಾಷ್ಟ್ರೀಯ ಭಾರತದ ಕಾಂಗ್ರೇಸ್‌ನ ಮೊದಲನೆಯ ಮಹಿಳಾ ಅಧ್ಯಕ್ಷರಾದವರು ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾದವರು. 1879ರ ಫೆಬ್ರವರಿ 13ರಂದು ಜನಿಸಿದ ಇವರು, ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದ ಅಗೋರೆನಾಥ್ ಚಟ್ಟೋಪಾಧ್ಯರು ಮತ್ತು ಬಂಗಾಳಿ ಕವಿಯಿತ್ರಿಯಾದ ಬರಾಡ ಸುಂದರಿ ದೇವಿ ದಂಪತಿಗಳ ಎಂಟು ಮಕ್ಕಳಲ್ಲಿ ಮೊದಲನೆಯವಾಗಿದ್ದರು. ಇವರ ಒಬ್ಬ ಸಹೋದರನಾದ ಬಿರೇಂದ್ರನಾಥ್ ಚಳುವಳಿಗಾರರಾಗಿದ್ದವರು. ಮತ್ತೊಬ್ಬ ಸಹೋದರ ಹರಿನಾಥ್ ಕವಿ, ನಾಟಕಗಾರ ಮತ್ತು ನಟನೆಯನ್ನು ಮಾಡುತ್ತಿದ್ದವರು. ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದ ಸರೋಜಿನಿ ನಾಯ್ಡುರವರು ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ನಿರರ್ಗಳವಾಗಿ ಮಾತಾನಾಡುತ್ತಿದ್ದರು. ಇವರು ಹನ್ನೆರಡನೇ ವಯಸ್ಸಿನಲ್ಲಿಯೇ ಮದ್ರಾಸ್ ವಿಶ್ವವಿದ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೇಲ್ದರ್ಜೆಯಲ್ಲಿ ಪಾಸಾಗಿ ರಾಷ್ಟ್ರಮಟ್ಟದಲ್ಲಿ ಕೀರ್ತಿಯನ್ನು ಪಡೆದರು. ಇವರ ತಂದೆ ಇವರು ಗಣಿತ ತಜ್ಞೆ ಅಥವಾ ವಿಜ್ಞಾನಿಯಾಗಲಿ ಎಂದು ಬಯಸಿದ್ದರು ಆದರೆ ಸರೋಜಿನಿಯವರು ಕವಿಯಿತ್ರಿಯಾಗಲು ಇಷ್ಟಪಟ್ಟಿದ್ದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಫೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ಕೊಟ್ಟರು. ತನ್ನ 16ನೇ ವಯಸ್ಸಿನಲ್ಲಿ ಇವರು ಮೊದಲು ಇಂಗ್ಲೇಂಡಿನ ಕಿಂಗ್ಸ್ ಕಾಲೇಜಿನಲ್ಲಿ ಮತ್ತು ಆಮೇಲೆ ಕ್ಯಾಬ್ರಿಂಡ್ಜ್ ನ ಗಿರ್ಟನ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಅಲ್ಲಿ ಇವರು ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಆರ್ಥರ್ ಸೈಮೊನ್ಸ್ ಮತ್ತು ಎಡ್ಮಂಡ್ ಗೋಸೆಯವರನ್ನು ಭೇಟಿ ಮಾಡಿದರು. ಗೋಸೆಯವರು ಸರೋಜಿನಿಯವರನ್ನು ಭಾರತದಲ್ಲಿರುವ ಬೆಟ್ಟ-ಗುಡ್ಡಗಳು, ನದಿಗಳು, ದೇವಸ್ಥಾನಗಳು, ಜನರ ಜೀವನ ಕ್ರಮ ಮುಂತಾದ ವಿಷಯಗಳ ಮನದಲ್ಲಿಟ್ಟುಕೊಂಡು ತಮ್ಮ ಕವಿತೆಗಳನ್ನು ರಚಿಸಿದರೆ ಚೆನ್ನಾಗಿರುತ್ತದೆ ಎಂದು ಮನದಟ್ಟು ಮಾಡಿಕೊಟ್ಟರು. ಅದರಂತೆ ಸರೋಜಿನಿಯವರು ಸಮಕಾಲೀನ ಭಾರತ ದೇಶದ ಜನರ ಜೀವನಕ್ರಮಗಳನ್ನು ತಮ್ಮ ಕವಿತೆಗಳಲ್ಲಿ ವರ್ಣಿಸಿದರು. ಇವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಡಾ. ಗೋವಿಂದರಾಜು ನಾಯ್ಡುರವರನ್ನು ಭೇಟಿಯಾದರು. ನಂತರ ಅವರನ್ನು ಪ್ರೇಮಿಸಿದರು. ಇವರು ತಮ್ಮ ವಿದ್ಯಾಭ್ಯಾಸಗಳನ್ನು ಮುಗಿಸಿ ತಮ್ಮ 19ನೇ ವರ್ಷದಲ್ಲಿ ಗೋವಿಂದರಾಜು ನಾಯ್ಡುರವರನ್ನು ಅಂತರ್ಜಾತಿಯ ಮದುವೆಗಳು ನಡೆಯಲು ಅವಕಾಶವಿಲ್ಲದಿದ್ದ ಕಾಲದಲ್ಲೇ ಮದುವೆಯಾದರು.ಇದು ಇವರು ತೆಗೆದುಕೊಂಡ ಕ್ರಾಂತಿಕಾರಕ ಕ್ರಮವಾಗಿತ್ತು. ಇವರಿಗೆ ಜಯಸೂರ್ಯ, ಪದ್ಮಿನಿ, ರಣಧೀರ್ ಮತ್ತು ಲೈಲಾಮಣಿ ಎನ್ನುವ ನಾಲ್ಕು ಜನ ಮಕ್ಕಳಿದ್ದಾರೆ. ಮಹಿಳೆಯರು ಅಡಿಗೆ ಮಾಡಲು ಮಾತ್ರ ಸೀಮಿತವಾಗಿಲ್ಲವೆಂದು ಇವರು ಭಾರತದ ಮಹಿಳೆಯರನ್ನು ಎಚ್ಚರಗೊಳಿಸಿದರು. ಅವರನ್ನು ಅಡಿಗೆ ಮನೆಯ ಆಚೆಗೂ ಇರುವ ಪ್ರಪಂಚವನ್ನು ನೋಡಲು ಹೊರ ಬರುವಂತೆ ಪ್ರೇರೇಪಿಸಿದರು. ರಾಜ್ಯ-ರಾಜ್ಯಗಳಲ್ಲಿರುವ, ಒಂದೊಂದು ಜಿಲ್ಲೆಗಳಲ್ಲೂ ಸಂಚರಿಸಿ ಮಹಿಳಾ ಸ್ವಾತಂತ್ರ‍್ಯದ ಹಕ್ಕಿನ ಬಗ್ಗೆ ಹೇಳಿದರು. ಭಾರತದಲ್ಲಿ ಮಹಿಳೆಯರು ಸ್ವ-ಗೌರವವನ್ನು ಪಡೆಯುವಂತೆ ಮಾಡಿದರು. ಸರೋಜಿನಿಯವರು ತಮ್ಮ ಕಛೇರಿಯಲ್ಲಿ 2ನೇ ಮಾರ್ಚ್ 1949ರಲ್ಲಿ ನಿಧನರಾದರು. ಇವರಿಗೆ ಕರಾವಳಿ ತರಂಗಿಣಿ ನಮಿಸುತ್ತಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ