image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂಗವೈಕಲ್ಯತೆಗೂ ಕ್ಯಾರೆ ಎನ್ನದ ದೀಪಾ ಮಲಿಕ್

ಅಂಗವೈಕಲ್ಯತೆಗೂ ಕ್ಯಾರೆ ಎನ್ನದ ದೀಪಾ ಮಲಿಕ್

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ತನ್ನ ಜೀವನದಲ್ಲಿ ಒಂದಿಲ್ಲೊಂದು ನೋವು, ಅವಮಾನಗಳನ್ನು ಅನುಭವಿಸಿ, ಅದನ್ನು ಮೆಟ್ಟಿ ನಿಂತು ತನ್ನ ಜೀವನವನ್ನು ಪಾವನವಾಗಿಸಿಕೊಂಡಿದ್ದಾಳೆ. ಅದರಲ್ಲೂ ತನ್ನ ಅಂಗವೈಕಲ್ಯದಿಂದಲೂ ವಿಚಲಿತರಾಗದೇ ಸಾಧನೆಯ ಮೆಟ್ಟಿಲನ್ನು ಏರಿ ಅದೆಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಅಂತಹ ಹೆಣ್ಣುಮಕ್ಕಳಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ “ದೀಪಾ ಮಲಿಕ್” ಇಂದಿನ ಕರಾವಳಿ ತರಂಗಿಣಿಯ ಅತಿಥಿ. 30ಸೆಪ್ಟೆಂಬರ್ 1970 ರಂದು ಸೋನಿಪತ್ ಹಿಂದೂ ಜಾಟ್ ಕುಟುಂಬದಲ್ಲಿ ಜನಿಸಿದ ಇವರು ಹಿರಿಯ ಪದಾತಿ ಸೈನ್ಯದ ಕರ್ನಲ್ ಬಿ.ಕೆ. ನಾಗಪಾಲ್ ಮಗಳು.ಹರಿಯಾಣದ ದೀಪಾ ಮಲಿಕ್ ಅವರು ಬೆನ್ನುಹುರಿಯ ಗಡ್ಡೆಯ ಸಮಸ್ಯೆಯಿಂದ ಬಳಲಿದ್ದರು.

ಗಡ್ಡೆಯನ್ನು ತೆಗೆಯಲು 3ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರ ದೇಹದಲ್ಲಿ ಒಟ್ಟು 183 ಹೊಲಿಗೆಗಳನ್ನು ಹಾಕಲಾಗಿತ್ತು. ಆಗ ಸೊಂಟದಿಂದ ಪಾದದವರೆಗಿನ ಚೈತನ್ಯವನ್ನು ಕಳೆದು ಕೊಂಡು ಗಾಲಿ ಕುರ್ಚಿಯನ್ನೇ ಅವಲಂಬಿಸಿದ್ದಾರೆ. 48 ವರ್ಷದಲ್ಲಿ ಇವರು ರಿಯೋ ಪ್ಯಾರಾ ಒಲಿಂಪಿಕ್ 2016ರಲ್ಲಿ ಬೆಳ್ಳಿ ಪದಕ ಗೆದ್ದ ದೇಶದ ಮೊದಲ ಮಹಿಳಾ ಕ್ರೀಡಾ ಪಟು. 2012 ದೀಪಾ ತನ್ನ 42 ವರ್ಷ ವಯಸ್ಸಿನಲ್ಲಿರುವಾಗ ಅರ್ಜುನ ಪ್ರಶಸ್ತಿ ಗಳಿಸಿದ್ದಾರೆ. ಈಕೆ ಬೈಕರ್, ಈಜಿನಲ್ಲೂ ಹೆಸರು ಮಾಡಿದ್ದು, ಅಥ್ಲೆಟಿಕ್ಸ್ ನಲ್ಲಿ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. 27ನೇ ವಯಸ್ಸಿನಲ್ಲಿ ಪಾಧಿಶ್ರ‍್ವಧಿವಾಯು ಆದರೂ ಧೃತಿಗೆಡದೆ. ತನ್ನ 36ನೇ ವಯಸ್ಸಿನಲ್ಲಿ ಕ್ರೀಡೆಯತ್ತ ಮುಖ ಮಾಡಿ, 46ನೇ ವಯಸ್ಸಿಗೆ ರಿಯೋ ಪ್ಯಾರಾ ಒಲಿಂಪಿಕ್ಸಿ ನಲ್ಲಿ ಬೆಳ್ಳಿ ಗೆದ್ದು ಸಾಧನೆ ಮಾಡಿದ್ದಾರೆ. ಹಾಗೆಯೆ ಅವರು ವಿವಿಧ ಸಾಹಸ ಕ್ರೀಡೆಗಳಲ್ಲಿ ತನ್ನ ಭಾಗವಹಿಸುವಿಕೆಗೆ ಅತ್ಯುನ್ನತ ಪುರಸ್ಕಾರಗಳನ್ನು ಗಳಿಸಿರುವುದರೊಂದಿಗೆ ಹಿಮಾಲಯ ಮೋಟಾರ್ ಅಸೋಸಿಯೇಷನ್ ಮತ್ತು ಭಾರತದ ಮೋಟಾರು ಕ್ರೀಡೆ ಕ್ಲಬ್ಸ್ ಒಕ್ಕೂಟದ ಸಹಸದಸ್ಯರು. 8 ದಿನ, 1700 ಕಿ.ಮೀ ದೂರ 18000 ಅಡಿ ಎತ್ತರದ ಶೂನ್ಯಕ್ಕಿಂತ ಕೆಳಗಿನ ತಾಪಮಾನದಲ್ಲಿ ಡ್ರೈವ್ ಮಾಡಿದ್ದಾರೆ. ಯಮುನಾ ನದಿಯನ್ನು ವಿರುದ್ಧವಾಗಿ ಈಜಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೂ ಸೇರಿದ್ದಾರೆ.

ಶಾಟ್‌ಪುಟ್ ಅಲ್ಲದೆ ಜಾವೆಲಿನ್ ಥ್ರೋ, ಈಜು ಸ್ಪರ್ಧೆಗಳಲ್ಲಿಯೂ ಸ್ಪರ್ಧಿಸಿದ್ದರು. 2011ರ ವಿಶ್ವಚಾಂಪಿಯನ್‌ಷಿಪ್ ಶಾಟ್‌ಪುಟ್ ಮತ್ತು ಡಿಸ್ಕಸ್ ಥ್ರೋನಲ್ಲಿ ಅವರು ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ರಿಯೊ ಪ್ಯಾರಾಲಿಂಪಿಕ್ಸ್  ನಲ್ಲಿ ಬೆಳ್ಳಿ ಪಡೆದ ದೀಪಾಗೆ ಪೈಪೋಟಿ ಒಡ್ಡಿದ ಬಹರೇನ್‌ನ ಫಾತೀಮಾ ನೆದಾಮ್ ಮತ್ತು ಗ್ರೀಸ್ ದೇಶದ ದಿಮಿ ತ್ರಾ ಕೊರೊಕಿಡಾ ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದರು. ಹರಿಯಾಣ ಕ್ರೀಡಾ ಯೋಜನೆ ಯಲ್ಲಿ ದೀಪಾ ಅವರಿಗೆ ರೂ.೪ ಕೋಟಿ ಪುರಸ್ಕಾರ ನೀಡಲಾಯಿತು.2018ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಕ್ರೀಡಾ ಇಲಾಖೆಯಲ್ಲಿ ಕೆಲಸದಲ್ಲಿರುವ ದೀಪಾ, ಕರ್ನಲ್ ಬಿಕ್ರಮ್ ಸಿಂಗ್ ಅವರ ಪತ್ನಿ.  ದೇವಿಕಾ ಮತ್ತು ಅಂಬಿಕಾ ಎಂಬ ಎರಡು ವಯಸ್ಕ ಹೆಣ್ಣು ಮಕ್ಕಳ ತಾಯಿ. ದೊಡ್ಡವಳು ಯುಕೆನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿದ್ದು, ಸ್ಪೋರ್ಟ್ಸ್ ಸೈನ್ಸ್ ಕುರಿತು ಸಂಶೋಧನೆ ಮಾಡುತ್ತಿದ್ದರೆ, ಚಿಕ್ಕವಳು ಎಂಬಿಒ ಓದಿದ್ದಾಳೆ. ಇಂತಹ ಛಲಗಾತಿಗೆ ಕರಾವಳಿ ತರಂಗಿಣಿ ಶುಭ ಹಾರೈಸುತ್ತಿದೆ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ