ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವವಳು ಈ ಹೆಣ್ಣು. ಹೆಣ್ಣಿಲ್ಲದ ಮನೆ ಅದು ಮನೆಯಾಗಲು ಸಾದ್ಯವಿಲ್ಲ. ಯಾಕೆಂದರೆ ಗಂಡಿನ ಪ್ರತಿ ಹಂತದಲ್ಲಿಯೂ ಹೆಣ್ಣಿನ ಅವಶ್ಯಕತೆ ಇದ್ದೇ ಇರುತ್ತದೆ. ಹೆಣ್ಣು ಅಮ್ಮನಾಗಿ, ಅಕ್ಕನಾಗಿ, ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಹೀಗೇ ಒಂದಲ್ಲ ಒಂದು ರೀತಿಯಲ್ಲಿ ಗಂಡನ್ನು ಆವರಿಸಿಕೊಂಡಿರುತ್ತಾಳೆ. ಆದರೆ ಈ ಹೆಣ್ಣಿನ ಜೀವನದ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಇಂದೂ ಕೂಡ ಅದು ಸುಲಭವಾಗಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ಆದರೂ ಹೆಣ್ಣು ತನ್ನ ಜೀವನದಲ್ಲಿ ಅಪೂರ್ವವಾದದ್ದನ್ನು ಸಾದಿಸಿ ಉಳಿದವರಿಗೆ ಮಾದರಿಯಾಗಿದ್ದಾಳೆ. ಅಂತಹ ಹೆಣ್ಣು ಮಕ್ಕಳಲ್ಲಿ ಹೆಣ್ಣು ಅಡುಗೆ ಮನೆಯಲ್ಲಿಯೇ ಕೊಳೆಯಬೇಕಾದ ಸಂದರ್ಭದಲ್ಲೂ ಪರ ದೇಶದಲ್ಲಿ ಕಲಿತು ಕೃಷಿ ವಿಜ್ಙಾನಿಯಾದ “ಜಾನಕಿ ಅಮ್ಮಾಳ್” ಇಂದಿನ “ಕರಾವಳಿ ತರಂಗಿಣಿ”ಯ ಅತಿಥಿ. ಕೇರಳದ ತೆಲ್ಲಿಚೇರಿಯ ಒಂದು ಸುಸಂಸ್ಕೃತ ಕುಟುಂಬದಲ್ಲಿ 1897 ನವೆಂಬರ್ 4 ರಂದು ಜನಿಸಿದ ಜಾನಕಿ ಅಮ್ಮಾಳ್ ಅವರ ತಂದೆ ಕಕ್ಕತ್ ಕೃಷ್ಣನ್ ಮದ್ರಾಸ್ ತ್ವರಿತ ನ್ಯಾಯಾಲಯದಲ್ಲಿ ಉಪ ನ್ಯಾಯದೀಶರಾಗಿದ್ದರು.
ಅಮ್ಮಾಲ್ ಅವರಿಗೆ ಆರು ಜನ ಸಹೋದರರು ಹಾಗು ಐದು ಜನ ಸಹೋದರಿಯರಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೆಲ್ಲಿಚೇರಿಯಲ್ಲಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮದ್ರಾಸ್ ತೆರಳಿದರು. ತಮ್ಮ ಶಿಕ್ಷಣದ ನಂತರ ಅವರು ಮದ್ರಾಸ್‌ನ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನ ಸಲ್ಲಿಸಿದ್ದೂ ಅಲ್ಲದೆ, ಅಮೇರಿಕಾದ ಮಿಷಿಗನ್ ವಿಶ್ವವಿದ್ಯಾಲಯದಿಂದ ಶಿಷ್ಯವೇತನವನ್ನು ಪಡೆದು ಅಮೇರಿಕಾದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕ್ರೋಮೋಸೋಮ್ ಸಂಖ್ಯೆಗಳು ಮತ್ತು ಪ್ಲಾಯ್ಡಿ ಕುರಿತಾದ ಇವರ ಅಧ್ಯಯನಗಳು ಅನೇಕ ಸಂದರ್ಭಗಳಲ್ಲಿ ಜಾತಿ ಮತ್ತು ಪ್ರಭೇದಗಳ ವಿಕಾಸದ ಮೇಲೆ ಬೆಳಕು ಚೆಲ್ಲಿದವು. 1945 ರಲ್ಲಿ ಸಿ. ಡಿ. ಡಾರ್ಲಿಂಗ್ಟನ್ ಅವರೊಂದಿಗೆ ಜಂಟಿಯಾಗಿ ಬರೆದ ಕ್ರೋಮೋಸೋಮ್ ಅಟ್ಲಾಸ್ ಆಫ್ ಕಲ್ಟಿವೇಟೆಡ್ ಪ್ಲಾಂಟ್ಸ್ ಒಂದು ಸಂಕಲನವಾಗಿದ್ದು, ಇದು ಅನೇಕ ಜಾತಿಗಳ ಬಗ್ಗೆ ತನ್ನದೇ ಆದ ಹೆಚ್ಚಿನ ಕೃತಿಗಳನ್ನು ಸಂಯೋಜಿಸಿತು. ಔಷಧೀಯ ಮತ್ತು ಇತರ ಸಸ್ಯಗಳಲ್ಲದೆ ಸೋಲಾನಮ್, ದತುರಾ, ಮೆಂಥಾ, ಸಿಂಬೊಪೊಗನ್ ಮತ್ತು ಡಯೋಸ್ಕೋರಿಯಾ ತಳಿಗಳಲ್ಲೂ ಅಮ್ಮಲ್ ಕೆಲಸ ಮಾಡಿದರು. ಇವರ ಅತ್ಯಂತ ಗಮನಾರ್ಹವಾದ ಕೆಲಸವು ಕಬ್ಬು ಮತ್ತು ಬಿಳಿಬದನೆ ಮೇಲಿನ ಅಧ್ಯಯನಗಳನ್ನು ಒಳಗೊಂಡಿತ್ತು.
ಭಾರತದ ಕೇರಳದ ಮಳೆಕಾಡುಗಳಿಂದ ಔಷಧೀಯ ಮತ್ತು ಆರ್ಥಿಕ ಮೌಲ್ಯದ ಸಸ್ಯಗಳಲ್ಲಿ ಆಸಕ್ತಿಯನ್ನು ಪಡೆದರು. ಇವರು ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾದ ಶ್ರೀನಿವಾಸ ರಾಮಾನುಜನ್‌ರವರ ಧರ್ಮಪತ್ನಿ. ನಿವೃತ್ತಿಯ ನಂತರವೂ ಅಮ್ಮಲ್ ಔಷಧೀಯ ಸಸ್ಯಗಳು ಮತ್ತು ಎಥ್ನೋಬೊಟನಿ ಬಗ್ಗೆ ವಿಶೇಷ ಗಮನವನ್ನು ಕೇಂದ್ರೀಕರಿಸುವ ಕೆಲಸವನ್ನು ಮುಂದುವರೆಸಿದರು. ಅವರು ವಾಸಿಸುತ್ತಿದ್ದ ಮತ್ತು ಕೆಲಸ ಮಾಡುತ್ತಿದ್ದ ಸೆಂಟರ್ ಆಫ್ ಅಡ್ವಾನ್ಸ್ಡ್ ಸ್ಟಡಿ ಫೀಲ್ಡ್ ಲ್ಯಾಬೊರೇಟರಿಯಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ್ನು ಅಭಿವೃದ್ಧಿ ಪಡಿಸಿದರು. ಅಮ್ಮಾಳ್ ಅವರಿಗೆ 1935 ರಲ್ಲಿ ಭಾರತೀಯ ವಿಜ್ಞಾನ ಅಕಾಡಮಿಯ ವತಿಯಿಂದ ಪ್ರಶಸ್ತಿ ಲಭಿಸಿದೆ. 1957ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ ಇವರಿಗೆ ಫೆಲೋಶಿಪ್ ನೀಡಿ ಗೌರವಿಸಿತು. 1956 ರಲ್ಲಿ ಅಮೇರಿಕಾದ ಮಿಷಿಗನ್ ವಿಶ್ವವಿದ್ಯಾಲಯ ಇವರಿಗೆ ಎಲ್.ಎಲ್. ಡಿ ಪದವಿ ನೀಡಿ ಗೌರವಿಸಿತು. ಭಾರತ ಸರ್ಕಾರವು ಅಮ್ಮಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ 2000 ನೇ ಇಸವಿಯಲ್ಲಿ ಭಾರತ ಸರ್ಕಾರದ ಪರಿಸರ ಹಾಗು ವನ್ಯಸಂರಕ್ಷಣ ಇಲಾಖೆ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇವರ ಹೆಸರಿನ ಪ್ರಶಸ್ತಿ ನೀಡುವುದನ್ನು ಪ್ರಾರಂಭಿಸಿತು. 1984 ಫೆಬ್ರವರಿ 2ರಂದು ವಿಧಿವಶರಾದರು. ಇಂತಹ ಮಹಾನ್ ಸಾಧಕಿಗೆ ಕರಾವಳಿ ತರಂಗಿಣಿ ನಮಿಸುತ್ತಿದೆ.
✍ಲಲಿತಶ್ರೀ ಪ್ರೀತಂ ರೈ