ನವದೆಹಲಿ: ಮತ ಎಣಿಕೆಯ ದಿನದಂದು ಆರಂಭಿಕ ಟ್ರೆಂಡ್‌ಗಳನ್ನು ತೋರಿಸುವ ಸುದ್ದಿ ವಾಹಿನಿಗಳ ಅಭ್ಯಾಸವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಅಭ್ಯಾಸ 'ಅಸಂಬದ್ಧ' ಎಂದು ಹೇಳಿದ್ದಾರೆ.
ಇಂದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲು ನವದೆಹಲಿಯಲ್ಲಿ ಕರೆದ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ಇನ್ನು, ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್‌ಗಳು) ನಿರೀಕ್ಷೆಗಳನ್ನು ಹೆಚ್ಚಿಸಿ ದೊಡ್ಡ ಪ್ರಮಾಣದಲ್ಲಿ ಗಮನವನ್ನು ಬೇರೆಡೆ ಸೆಳೆಯುತ್ತವೆ. ಮಾಧ್ಯಮಗಳಿಗೆ ಅದರಲ್ಲೂ ಪ್ರಮುಖವಾಗಿ ಸುದ್ದಿವಾಹಿನಿಗಳು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಎಕ್ಸಿಟ್ ಪೋಲ್‌ಗಳು ನಮ್ಮ ಆಡಳಿತದ ವ್ಯಾಪ್ತಿಯಲ್ಲಿಲ್ಲ. ಹಾಗಿದ್ದರೂ ಕೂಡಾ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಎಕ್ಸಿಟ್ ಪೋಲ್‌ಗಾಗಿ ಸಂಗ್ರಹಿಸುವ ಮಾದರಿಗಳ (ಸ್ಯಾಂಪಲ್‌ಗಳು) ಗಾತ್ರವೇನು?, ಈ ಸಮೀಕ್ಷೆಗಳನ್ನು ಎಲ್ಲಿ ಮಾಡಲಾಗುತ್ತದೆ?, ಅದರ ಫಲಿತಾಂಶಗಳು ಹೇಗೆ ನಿರ್ಧಾರವಾಗುತ್ತವೆ?, ಒಂದು ವೇಳೆ ಅದು ನಿಜವಾದ ಫಲಿತಾಂಶಕ್ಕೆ ಹೋಲಿಕೆಯಾಗದಿದ್ದರೆ ತಮ್ಮ ಜವಾಬ್ದಾರಿ ಏನು? ಈ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆಯೇ ಎಂಬುದು ಮುಖ್ಯವಾಗುತ್ತವೆ ಎಂದು ಅವರು ಚಾಟಿ ಬೀಸಿದರು.