image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಿ 7ರಂದು ಮುಂಬೈಯಲ್ಲಿ ವಿಶ್ವಬಂಟರ ಸಮಾಗಮ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆ

ಡಿ 7ರಂದು ಮುಂಬೈಯಲ್ಲಿ ವಿಶ್ವಬಂಟರ ಸಮಾಗಮ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಸಭೆ

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ  ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ  ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳ ಒಗ್ಗಟ್ಟಿನಲ್ಲಿ "ವಿಶ್ವ ಬಂಟರ ಸಮಾಗಮ"ಬೃಹತ್ ಕಾರ್ಯಕ್ರಮ ನಡೆಸುವ ಕುರಿತು ವಿಶೇಷ  ಸಭೆ ಅ 15 ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್   ಸಂಕಿರಣದಲ್ಲಿ ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ  ನಡೆಯಿತು.  ಒಕ್ಕೂಟದ ಅಧ್ಯಕ್ಷರಾದ  ಐಕಳ ಹರೀಶ್ ಶೆಟ್ಟಿಯವರು ಮಾತನಾಡುತ್ತಾ  ಕಳೆದ ವರ್ಷ ಉಡುಪಿಯಲ್ಲಿ ಎರಡು ದಿನಗಳ ವಿಶ್ವಮಟ್ಟದ ಬಂಟ ಸಮ್ಮಿಲನವನ್ನು ಆಯೋಜಿಸಿಕೊಂಡಿದ್ದು ಸುಮಾರು 75 ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆದಿದೆ. ಮಂಬಯಿ ನಗರದಲ್ಲಿ 3 ವರ್ಷಗಳು ಹಿಂದೆ ಒಕ್ಕೂಟದ ಬಂಟ ಸಮ್ಮಿಲನ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಮುಂಬೈ ಮಹಾನಗರದಲ್ಲಿ ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳನ್ನು ಒಟ್ಟು  ಸೇರಿಸುವ ಮಹಾನ್ ಉದ್ದೇಶದೊಂದಿಗೆ ಡಿಸೆಂಬರ್ 7ರಂದು ಶನಿವಾರ ಕುರ್ಲಾ ಬಂಟರ ಭವನದಲ್ಲಿ "ವಿಶ್ವ ಬಂಟರ ಸಮಾಗಮ" ಜಾಗತಿಕ ಮಟ್ಟದ ಕಾರ್ಯಕ್ರಮ  ಬೆಳಿಗ್ಗೆಯಿಂದ ಸಂಜೆವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ  ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ,ಮುಖ್ಯ ಅತಿಥಿಯಾಗಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರಾದ  ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ  ಸಿಎಂಡಿ  ತೋನ್ಸೆ  ಆನಂದ ಎಮ್.ಶೆಟ್ಟಿ ಯವರು ಪಾಲ್ಗೊಳ್ಳಲಿದ್ದು ಹಾಗೂ ಪ್ರತಿಷ್ಠಿತ ಉದ್ಯಮಿಗಳು ಸಮಾಜ ಸೇವಕರು ಜಗತ್ತಿನ ವಿವಿಧ ಬಂಟಸಂಘಗಳ ಅಧ್ಯಕ್ಷರು ಸೇರಿಕೊಳ್ಳಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮವನ್ನು ಒಕ್ಕೂಟದ ಮಹಾದಾನಿ ಹೇರಂಬ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕರಾದ  ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಎಮ್  ಆರ್ ಜಿ ಗ್ರೂಪ್  ಆಡಳಿತ ನಿರ್ದೇಶಕ ಡಾ. ಕೆ ಪ್ರಕಾಶ್ ಶೆಟ್ಟಿ ಪಾಲ್ಗೊಳ್ಳಲಿದ್ದು, ವಿಶ್ವದ ಬಂಟರ ಸಂಘಗಳ ನೂತನ ಅಧ್ಯಕ್ಷರುಗಳಿಗೆ ಸನ್ಮಾನ ನಡೆಯಲಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು. 

 ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ  ವಿಶ್ವನಾಥ್ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಮಹಾನಗರದ ಬಂಟರ ಸಂಘಗಳಿಗೆ ನೃತ್ಯ ಸ್ಪರ್ಧೆ ನಡೆಯಲಿದ್ದು, ಒಟ್ಟು ಕಾರ್ಯಕ್ರಮ ಸಮಿತಿಯ ಕಾರ್ಯಧ್ಯಕ್ಷರಾಗಿ ಡಾ ಆರ್ ಕೆ ಶೆಟ್ಟಿ ಕಾರ್ಯ ನಿರ್ವಹಿಸಲಿದ್ದಾರೆ.  ಸ್ವಾಗತ ಸಮಿತಿಯ ಸಂಚಾಲಕರಾಗಿ ರತ್ನಾಕರ್ ಶೆಟ್ಟಿ ಮುಂಡ್ಕೂರು, ಸುಬ್ಬಯ್ಯ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಂದೇಶ,   ಶಶಿಧರ್ ಶೆಟ್ಟಿ ಇನ್ನಂಜೆ, ರವೀಂದ್ರನಾಥ ಭಂಡಾರಿ,  ಇಂದ್ರಾಳಿ ದಿವಾಕರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್,  ಸುಕುಮಾರ್ ಶೆಟ್ಟಿ, ರಾಜೀವ ಭಂಡಾರಿ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕರಾಗಿ  ಕರ್ನೂರು ಮೋಹನ್ ರೈ,  ನವೀನ್ ಶೆಟ್ಟಿ ಇನ್ನ ಬಾಳಿಕೆ,  ಸಭಾ ಕಾರ್ಯಕ್ರಮದ ಮೇಲ್ವಿಚಾರಕರಾಗಿ ಅಶೋಕ್ ಪಕ್ಕಳ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಘಟಕರಿಗೆ ಜವಾಬ್ದಾರಿ ನೀಡಲಾಗುವುದು ಎಂದರು.

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡಿ ಬಂಟರ ಸಂಘದ ಪೂರ್ಣ ರೀತಿಯ ಸಹಕಾರವಿದ್ದು, ಈ ಕಾರ್ಯಕ್ರಮಕ್ಕೆ ಹೊಸ  ದಾನಿಗಳು ಬರಬೇಕು. ಸಮಾಜದ ಮೇಲಿನ ಅಭಿಮಾನದಿಂದ ಕಾರ್ಯಕ್ರಮವನ್ನು ಸಮಾಜ ಬಾಂಧವರು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು. ಕಾರ್ಯಕ್ರಮ ಸಮಿತಿಯ ಕಾರ್ಯ ಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿರುವ ಡಾ. ಆರ್ ಕೆ ಶೆಟ್ಟಿ  ಮಾತನಾಡಿ  ದಾನಿಗಳು ಸಹಕಾರ ನೀಡಿದರೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಹೊಸತನ ನೀಡುವಲ್ಲಿ ರೂಪರೇಷೆಯನ್ನು ತಯಾರಿಸಲಿದ್ದೇವೆ ಸಮಾಜ ಬಾಂಧವರೆಲ್ಲರೂ ಸಹಕಾರ ನೀಡಬೇಕು ಎಂದು ನುಡಿದರು 

ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾದ ರತ್ನಾಕರ್ ಶೆಟ್ಟಿ ಮುಂಡ್ಕೂರು, ಡಾ ಆರ್ ಕೆ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಂದೇಶ್,   ಶಶಿಧರ್ ಶೆಟ್ಟಿ ಇನ್ನಂಜೆ, ರವೀಂದ್ರನಾಥ ಭಂಡಾರಿ, ಇಂದ್ರಾಳಿ ದಿವಾಕರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್,  ಸುಕುಮಾರ್ ಶೆಟ್ಟಿ,  ರಾಜೀವ ಭಂಡಾರಿ,  ಕರ್ನೂರು ಮೋಹನ್ ರೈ,  ನವೀನ್ ಶೆಟ್ಟಿ ಇನ್ನ ಬಾಳಿಕೆ, ಅಶೋಕ್ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.

ಸಭೆಯ ಪ್ರಾರಂಭದಲ್ಲಿ ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಉಳ್ತೂರು ಮೋಹನದಾಸ್ ಶೆಟ್ಟಿ ವಂದಿಸಿದರು.ಈ ಅದ್ದೂರಿಯ ಬೃಹತ್ ಕಾರ್ಯಕ್ರಮದಲ್ಲಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ  ತೋನ್ಸೆ ಆನಂದ್ ಎಂ. ಶೆಟ್ಟಿ, ಮಹಾ ನಿರ್ದೇಶಕ  ಡಾ. ಕೆ.ಪ್ರಕಾಶ್ ಶೆಟ್ಟಿ, ಮಹಾ-ನಿರ್ದೇಶಕ   ಶಶಿಧರ್ ಶೆಟ್ಟಿ ಬರೋಡ,ಮಹಾ-ನಿರ್ದೇಶಕಕೆ. ಎಂ. ಶೆಟ್ಟಿ ವಿ. ಕೆ. ಗ್ರೂಪ್ಸ್, ಮಹಾ-ನಿರ್ದೇಶಕ ರಾಜೇಶ್ ಎನ್. ಶೆಟ್ಟಿ ರಾಕ್ಷೀ  ಡೆವಲಪರ್ಸ್,  ಮಹಾ-ನಿರ್ದೇಶಕ  ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ,ಮಹಾ-ನಿರ್ದೇಶಕ  ಅರವಿಂದ್ ಆನಂದ್ ಶೆಟ್ಟಿ , ಮಹಾ-ನಿರ್ದೇಶಕ ಅಶೋಕ್ ಎಸ್. ಶೆಟ್ಟಿ ಮೆರಿಟ್, ಮಹಾ-ನಿರ್ದೇಶಕ ರಾಜೇಂದ್ರ ವಿ. ಶೆಟ್ಟಿ  ಪಂಜುರ್ಲಿ ಗ್ರೂಪ್ಸ್, ಹಾಗೂ ನಿರ್ದೇಶಕರು, ಮಹಾ ಪೋಷಕರು, ಪೋಷಕರು, ದಾನಿಗಳು, ಗೌರವಾನ್ವಿತ ಆಡಳಿತ ಮಂಡಳಿ ಸದಸ್ಯರು, ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರುಗಳು  ಭಾಗವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ