ಅಮೆರಿಕ: ಇಸ್ರೇಲ್‌ಗೆ ಮಿಲಿಟರಿ ಸಿಬ್ಬಂದಿಯೊಂದಿಗೆ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -ಥಾಡ್ ಕ್ಷಿಪಣಿ ನಿಯೋಜಿಸುವುದಾಗಿ ಅಮೆರಿಕ ಭಾನುವಾರ ಘೋಷಿಸಿದೆ.
ಏಪ್ರಿಲ್ 13 ರಂದು ಮತ್ತು ಮತ್ತೆ ಅಕ್ಟೋಬರ್ 1 ರಂದು ಇರಾನ್ ಇಸ್ರೇಲ್ ಮೇಲೆ ಭಾರಿ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್ನಿಂದ ಭಾರಿ ಅಪಾಯ ಇದೆ ಎಂದು ಪೆಂಟಗನ್ ವಿವರಿಸಿದ ನಂತರ ಇಸ್ರೇಲ್‌ನ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಅಮೆರಿಕ ಚಿತ್ತ ಹರಿಸಿದೆ. ಹೀಗಾಗಿ ಇಸ್ರೇಲ್‌ಗೆ ಥಾಡ್ ರಕ್ಷಣಾ ವ್ಯವಸ್ಥೆ ನೀಡಲು ಕ್ರಮ ಕೈಗೊಂಡಿದೆ.
ಅಮೆರಿಕ ಅಧ್ಯಕ್ಷರ ನಿರ್ದೇಶನದ ಮೇರೆಗೆ, ಸೆಕ್ರೆಟರಿ ಆಸ್ಟಿನ್ ಅವರು, ಟರ್ಮಿನಲ್ ಹೈ-ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -THAAD ಅನ್ನು ಇಸ್ರೇಲ್‌ಗೆ ನಿಯೋಜಿಸಲು ಅಧಿಕಾರ ನೀಡಲಾಗಿದೆ. ಏಪ್ರಿಲ್ 13 ರಂದು ಇರಾನ್‌ನ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿದ ಬಳಿಕ ಅಮೆರಿಕ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದೆ. ಅಕ್ಟೋಬರ್ 1 ರಂದು ಈ ಬಗ್ಗೆ " ಪೆಂಟಗನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.