ಮಹಾರಾಷ್ಟ್ರ: "ಕಳೆದ ಕೆಲವು ವರ್ಷಗಳಲ್ಲಿ ವರ್ಧಿತ ವಿಶ್ವಾಸಾರ್ಹತೆಯೊಂದಿಗೆ ಭಾರತವು ವಿಶ್ವದಲ್ಲಿ ಬಲಿಷ್ಠವಾಗಿದೆ ಮತ್ತು ಹೆಚ್ಚು ಗೌರವಾನ್ವಿತವಾಗಿದೆ. ಆದರೆ, ಕೆಲ ಕೆಟ್ಟ ಪಿತೂರಿಗಳು ದೇಶದ ಸಂಕಲ್ಪವನ್ನು ಪರೀಕ್ಷಿಸುತ್ತಿವೆ" ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅವರು ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಬಾಂಗ್ಲಾದೇಶದಿಂದ ಭಾರತಕ್ಕೆ ಬೆದರಿಕೆ ಇದೆ, ತನ್ನ ರಕ್ಷಣೆಗಾಗಿ ಪಾಕಿಸ್ತಾನದೊಂದಿಗೆ ಕೈಜೋಡಿಸಬೇಕು ಎಂಬ ನಿರ್ದಿಷ್ಟ ನಿರೂಪಣೆಯನ್ನು ಹರಡಲಾಗುತ್ತಿದೆ. ಸನ್ನಿವೇಶವು ಅನುಕೂಲಕರವಾಗಿರಲಿ ಅಥವಾ ಇಲ್ಲದಿರಲಿ. ಶುಭ ಮತ್ತು ಸದಾಚಾರದ ವಿಜಯಕ್ಕೆ ವೈಯಕ್ತಿಕ ಮತ್ತು ರಾಷ್ಟ್ರೀಯ ಪಾತ್ರದ ದೃಢತೆಯು ಶಕ್ತಿಯ ಅಡಿಪಾಯವಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ವರ್ಧಿತ ವಿಶ್ವಾಸಾರ್ಹತೆಯೊಂದಿಗೆ ಭಾರತವು ಜಗತ್ತಿನಲ್ಲಿಯೇ ಪ್ರಬಲವಾಗಿದೆ ಹಾಗೂ ಹೆಚ್ಚು ಗೌರವಾನ್ವಿತವಾಗಿದೆ. ಒಂದು ದೇಶವು ಅದರ ಜನರ ರಾಷ್ಟ್ರೀಯ ಗುಣದಿಂದಾಗಿ ಶ್ರೇಷ್ಠವಾಗುತ್ತದೆ. ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಈ ವರ್ಷ ಮಹತ್ವದ್ದಾಗಿದೆ" ಎಂದರು.
"ಭಾರತದಲ್ಲಿ ಭರವಸೆಗಳು ಮತ್ತು ಆಕಾಂಕ್ಷೆಗಳ ಜೊತೆಜೊತೆಗೆ ಸವಾಲುಗಳು ಮತ್ತು ಸಮಸ್ಯೆಗಳೂ ಇದೆ. ಅಹಲ್ಯಾ ಬಾಯಿ ಹೋಳ್ಕರ, ದಯಾನಂದ ಸರಸ್ವತಿ, ಬಿರ್ಸಾ ಮುಂಡಾ ಇವರಂತಹ ಸಾಮಾಜಿಕ ಕಲ್ಯಾಣ, ಧರ್ಮ, ಸಂಸ್ಕೃತಿ ಮತ್ತು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅನೇಕ ವ್ಯಕ್ತಿಗಳಿಂದ ನಾವು ಸ್ಫೂರ್ತಿ ಪಡೆಯಬೇಕು" ಎಂದು ತಿಳಿ ಹೇಳಿದರು.
"ಬಾಂಗ್ಲಾದೇಶದಲ್ಲಿನ ದಬ್ಬಾಳಿಕೆ ಹಿಂದೂಗಳೂ ಸೇರಿದಂತೆ ಅಲ್ಪಸಂಖ್ಯಾತರ ತಲೆಯ ಮೇಲಿನ ಅಪಾಯದ ಕತ್ತಿ ತೂಗುತ್ತಿದೆ. ಹಿಂದೂಗಳು ಈಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ. ಅಸಂಘಟಿತ ಮತ್ತು ದುರ್ಬಲರಾಗಿರುವುದು ದುಷ್ಟರಿಂದ ದೌರ್ಜನ್ಯವನ್ನು ಆಹ್ವಾನಿಸಿದಂತೆ. ಹಿಂದೂಗಳು ಒಗ್ಗಟ್ಟಾಗಿರಬೇಕು" ಎಂದು ಕರೆ ನೀಡಿದರು.