image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಜೆರುಸಲೆಂ: "ರತನ್ ಟಾಟಾ ಅವರು ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸ್ನೇಹ ಬಾಂಧವ್ಯದ ಸರ್ವಶ್ರೇಷ್ಠ ವ್ಯಕ್ತಿ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೊಂಡಾಡಿದ್ದಾರೆ. ಭಾರತದ ಅತ್ಯಂತ ಗೌರವಾನ್ವಿತ ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿ ಶನಿವಾರ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ನನ್ನ ಗೆಳೆಯ ಹಾಗು ಪ್ರಧಾನಿ ನರೇಂದ್ರ ಮೋದಿ ಅವರೇ, ರತನ್ ಟಾಟಾರ ನಿಧನಕ್ಕೆ ನಾನು ಮತ್ತು ಇಸ್ರೇಲ್‌ ಜನರು ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅವರು ಭಾರತದ ಹೆಮ್ಮೆಯ ಪುತ್ರ. ಎರಡೂ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಗೆ ಕೆಲಸ ಮಾಡಿದ ಸರ್ವಶ್ರೇಷ್ಠ ವ್ಯಕ್ತಿ" ಎಂದು ತಿಳಿಸಿದ್ದಾರೆ. ಇದೇ ವೇಳೆ, ಟಾಟಾ ಅವರ ಕುಟುಂಬಕ್ಕೆ ತಮ್ಮ ಸಂತಾಪಗಳನ್ನು ತಿಳಿಸುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ.

"ರತನ್ ಟಾಟಾ ನಮ್ಮ ದೇಶದ ನಿಜವಾದ ಗೆಳೆಯ" ಎಂದು ಕಳೆದ ಗುರುವಾರ ಸಿಂಗಾಪುರ ಪ್ರಧಾನಿ ಲಾರೆನ್ಸ್‌ ವಾಂಗ್ ಬಣ್ಣಿಸಿದ್ದರು. ಅದೇ ರೀತಿ, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರಾನ್ ಸಂತಾಪ ವ್ಯಕ್ತಪಡಿಸುತ್ತಾ, ರತನ್ ಟಾಟಾ ಅವರು ನಾವೀನ್ಯತೆ ಮತ್ತು ಕೈಗಾರಿಕೋತ್ಪಾದನೆಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸುತ್ತಾ, ಭಾರತ-ಫ್ರಾನ್ಸ್‌ ನಡುವಿನ ಸಂಬಂಧ ಬಲಪಡಿಸುವಲ್ಲಿ ಅವರ ಪಾತ್ರವನ್ನು ಗುರುತಿಸಿ ಸ್ಮರಿಸಿದ್ದಾರೆ.

Category
ಕರಾವಳಿ ತರಂಗಿಣಿ