image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಎಂ ವಿಜಯನ್ ಅವರಿಗೆ ವಿಶ್ವಾಸಾರ್ಹತೆ ಇಲ್ಲ - ರಾಜ್ಯಪಾಲರ ಆರೋಪ

ಸಿಎಂ ವಿಜಯನ್ ಅವರಿಗೆ ವಿಶ್ವಾಸಾರ್ಹತೆ ಇಲ್ಲ - ರಾಜ್ಯಪಾಲರ ಆರೋಪ

ತಿರುವನಂತಪುರ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ವಿಶ್ವಾಸಾರ್ಹತೆಯೇ ಇಲ್ಲ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆರೋಪಿಸಿದ್ದು, ಸಿಎಂ ವಿಜಯನ್ ಮತ್ತು ರಾಜ್ಯಪಾಲ ಖಾನ್ ಮಧ್ಯೆ ದೀರ್ಘಕಾಲದಿಂದ ಶೀತಲ ಸಮರ ನಡೆಯುತ್ತಿದ್ದು, ಈಗ ರಾಜ್ಯಪಾಲರ ಹೊಸ ಆರೋಪದಿಂದ ಇದು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆಯಿದೆ.

ಕಳೆದ ತಿಂಗಳು ಎಡಪಂಥೀಯ ಸ್ವತಂತ್ರ ಶಾಸಕ ಪಿ.ವಿ.ಅನ್ವರ್ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ನಡೆಯುತ್ತಿರುವುದಾಗಿ ಆರೋಪಿಸಿದ ನಂತರ ಹೊಸ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಆಗಿನ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮತ್ತು ಪಿಣರಾಯಿ ವಿಜಯನ್ ಅವರ ರಾಜಕೀಯ ಕಾರ್ಯದರ್ಶಿ ಪಿ.ಶಶಿ ಚಿನ್ನ ಕಳ್ಳಸಾಗಣೆ ದಂಧೆಗೆ ಕಾರಣರಾಗಿದ್ದಾರೆ ಎಂದು ಅನ್ವರ್ ಆರೋಪಿಸಿದ್ದಾರೆ.

ಇದರ ನಂತರ ಪ್ರಮುಖ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ವಿಜಯನ್, "ಮಲಪ್ಪುರಂ ಜಿಲ್ಲೆಯು ಚಿನ್ನ ಕಳ್ಳಸಾಗಾಣಿಕೆಯ ಕೇಂದ್ರವಾಗಿದೆ ಮತ್ತು ಇದರಿಂದ ಬಂದ ಹಣವನ್ನು ರಾಜ್ಯ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ" ಎಂದು ಹೇಳಿದ್ದರು.

ಸಂದರ್ಶನವು ವಿವಾದವನ್ನು ಹುಟ್ಟುಹಾಕುತ್ತಿದ್ದಂತೆ, ವಿಜಯನ್ ಅವರ ಕಚೇರಿಯಿಂದ ರಾಷ್ಟ್ರೀಯ ದಿನಪತ್ರಿಕೆಯ ಸಂಪಾದಕರಿಗೆ ಪತ್ರ ಬರೆಯಲಾಗಿದ್ದು, ಸಂದರ್ಶನದಲ್ಲಿ ಸಿಎಂ ಯಾವುದೇ ನಿರ್ದಿಷ್ಟ ಸ್ಥಳ ಅಥವಾ ಪ್ರದೇಶವನ್ನು ಉಲ್ಲೇಖಿಸಿಲ್ಲ, ಅವರು ರಾಜ್ಯ ವಿರೋಧಿ ಅಥವಾ ರಾಷ್ಟ್ರ ವಿರೋಧಿ ಎಂಬ ಪದಗಳನ್ನು ಮಾತ್ರ ಬಳಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಲಾಗಿದೆ.

Category
ಕರಾವಳಿ ತರಂಗಿಣಿ