image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ವೇದಿಕೆ ಸಜ್ಜು :ಸಮಿತಿಯಿಂದ ಅಂತಿಮ ಮುದ್ರೆ - ಶೀಘ್ರ ಸಿಎಂಗೆ ವರದಿ ಸಲ್ಲಿಕೆ

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ವೇದಿಕೆ ಸಜ್ಜು :ಸಮಿತಿಯಿಂದ ಅಂತಿಮ ಮುದ್ರೆ - ಶೀಘ್ರ ಸಿಎಂಗೆ ವರದಿ ಸಲ್ಲಿಕೆ

ಉತ್ತರಾಖಂಡ : ಯೂನಿಫಾರ್ಮ್ ಸಿವಿಲ್ ಕೋಡ್ ನಿಯಮಗಳ ಸಮಿತಿ ಅಧ್ಯಕ್ಷ ಶತ್ರುಘ್ನ ಸಿಂಗ್, ಯುಸಿಸಿ ನಿಯಮಗಳಿಗೆ ಅಂತಿಮ ಮುದ್ರೆ ಹಾಕಲಾಗಿದ್ದು, ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ನಿಯಮಗಳ ಕುರಿತ ರಚನೆ ಮಾಡಿರುವ ಸಮಿತಿಯು ಅಂತಿಮ ಮುದ್ರೆ ಒತ್ತಿದ್ದು, ಉತ್ತರಾಖಂಡದಲ್ಲಿ ಯುಸಿಸಿ ಅನುಷ್ಠಾನಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ.

ರಾಜ್ಯ ವಿಧಾನಸಭೆಯು ಈಗಾಗಲೇ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಅಂಗೀಕರಿಸಿತ್ತು. ಆ ಬಳಿಕ ನಿಯಮಗಳ ರಚನೆ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯ ಮೊದಲ ಸಭೆ ಫೆಬ್ರವರಿ ಕೊನೆಯ ವಾರದಲ್ಲಿ ನಡೆದಿದ್ದು, ಇದೀಗ ಅಂತಿಮ ಸಭೆ ನಡೆಸಿ, ಏಕರೂಪ ನಾಗರಿಕ ಸಂಹಿತೆಯ ನಿಯಮಗಳಿಗೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗಾಗಿ ಯುಸಿಸಿ ಕೋಡ್ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ