image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024 ರ ನೊಬೆಲ್ ಪ್ರಶಸ್ತಿ

ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024 ರ ನೊಬೆಲ್ ಪ್ರಶಸ್ತಿ

ಅಮೆರಿಕ : ಜೀನ್ ಚಟುವಟಿಕೆಯು ಹೇಗೆ ನಿಯಂತ್ರಿತವಾಗುತ್ತದೆ ಎಂಬುದನ್ನು ತೋರಿಸುವ ಮೂಲಭೂತ ತತ್ವವನ್ನು ಕಂಡುಹಿಡಿದ ಇಬ್ಬರು ವಿಜ್ಞಾನಿಗಳಿಗೆ ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿ ನೀಡಿ ಗೌರವಿಲಾಗುತ್ತಿದೆ. ಜೀನ್ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆರ್​ಎನ್​ಎ ಅಣುಗಳ ಹೊಸ ವರ್ಗವಾದ ಮೈಕ್ರೋ ಆರ್​ಎನ್ಎಯನ್ನು ಅವರು ಕಂಡುಹಿಡಿದಿದ್ದಾರೆ" ಎಂದು ಸ್ವೀಡನ್​ನ ಕರೋಲಿನ್ ಸ್ಕಾ ಇನ್ ಸ್ಟಿಟ್ಯೂಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಕ್ರೋಆರ್​ಎನ್ಎ ಆವಿಷ್ಕಾರ ಮತ್ತು ಪೋಸ್ಟ್-ಟ್ರಾನ್ ಸ್ಕ್ರಿಪ್ಷನಲ್ ಜೀನ್ ನಿಯಂತ್ರಣದಲ್ಲಿ ಅದರ ಪಾತ್ರದ ಬಗ್ಗೆ ಸಂಶೋಧನೆ ಮಾಡಿದ್ದಕ್ಕಾಗಿ ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ರ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.

ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರ ಅದ್ಭುತ ಆವಿಷ್ಕಾರವು ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಅಗತ್ಯವಾಗಿರುವ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ತತ್ವವನ್ನು ಬಹಿರಂಗಪಡಿಸಿದೆ ಎಂದು ಅದು ಹೇಳಿದೆ.

ಜೀನ್ ಚಟುವಟಿಕೆಗಳು ಹೇಗೆ ನಿಯಂತ್ರಿತವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಳೆದ ಹಲವಾರು ದಶಕಗಳಿಂದ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಜೀನ್ ನಿಯಂತ್ರಣ ಪ್ರಕ್ರಿಯೆ ಹಾಳಾದರೆ ಅದು ಕ್ಯಾನ್ಸರ್, ಮಧುಮೇಹ ಅಥವಾ ರೋಗ ನಿರೋಧಕ ವೈಫಲ್ಯದಂಥ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.

ನಮ್ಮ ಕ್ರೋಮೋಸೋಮ್​ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯು ನಮ್ಮ ದೇಹದ ಎಲ್ಲಾ ಜೀವಕೋಶಗಳ ಸೂಚನಾ ಕೈಪಿಡಿ ಎಂದು ಹೇಳಬಹುದು. ಪ್ರತಿಯೊಂದು ಜೀವಕೋಶವು ಒಂದೇ ರೀತಿಯ ಕ್ರೋಮೋಸೋಮ್​ಗಳನ್ನು ಹೊಂದಿರುತ್ತದೆ. ಹೀಗಾಗಿ ಪ್ರತಿ ಜೀವಕೋಶವು ನಿಖರವಾಗಿ ಒಂದೇ ರೀತಿಯ ಜೀನ್ ಗಳನ್ನು ಮತ್ತು ನಿಖರವಾಗಿ ಒಂದೇ ರೀತಿಯ ಸೂಚನೆಗಳನ್ನು ಹೊಂದಿರುತ್ತದೆ. ಆದರೂ, ಸ್ನಾಯು ಮತ್ತು ನರ ಕೋಶಗಳಂತಹ ವಿಭಿನ್ನ ಕೋಶ ಪ್ರಕಾರಗಳು ಬಹಳ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿವೆ. ಈ ವ್ಯತ್ಯಾಸಗಳು ಹೇಗೆ ಉದ್ಭವಿಸುತ್ತವೆ ಎಂಬುದಕ್ಕೆ ಉತ್ತರವು ಜೀನ್ ನಿಯಂತ್ರಣದಲ್ಲಿದೆ.

Category
ಕರಾವಳಿ ತರಂಗಿಣಿ