ನವದೆಹಲಿ : ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ (ಎಐಎಂಸಿ) ಸಂಸ್ಥಾಪನಾ ದಿನವಾದ ಸೆಪ್ಟೆಂಬರ್ 15 ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿತ್ತು. ಅಂದಿನಿಂದ ನಡೆದ ನೋಂದಣಿಯಲ್ಲಿ 2 ಲಕ್ಷಕ್ಕೂ ಅಧಿಕ ಮಹಿಳೆಯರು ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ತಿಳಿಸಿದ್ದಾರೆ.
ಹರಿಯಾಣ ಚುನಾವಣೆಗೂ ಮೊದಲು ಕೇಂದ್ರ ರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತಂದಿದ್ದರೆ, ಕನಿಷ್ಠ 33 ಪ್ರತಿಶತದಷ್ಟು ಮಹಿಳೆಯರು ಚುನಾವಣಾ ಕಣದಲ್ಲಿರುತ್ತಿದ್ದರು. ರಾಜಕೀಯದಲ್ಲಿ ಅವರ ನ್ಯಾಯಯುತ ಪಾಲು ಹೆಚ್ಚುತ್ತಿತ್ತು ಎಂದು ಪ್ರತಿಪಾದಿಸಿದರು.
ಹರಿಯಾಣದಲ್ಲಿ ಬಿಜೆಪಿ ಆಡಳಿತದಿಂದಾಗಿ ಹಣದುಬ್ಬರ ಹೆಚ್ಚಿದೆ. ಇದು ಮಹಿಳೆಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟು ಮಾಡಿದೆ. ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ನಲ್ಲಿ ಅನರ್ಹರಾಗಿ ಕ್ರೀಡೆಯಿಂದಲೇ ಹೊರಬಿದ್ದಾಗ ಅವರ ಪರವಾಗಿ ಹೋರಾಡಿದ್ದು ಕಾಂಗ್ರೆಸ್. ಪ್ರಧಾನಿ ಮೋದಿ ಮತ್ತು ಬಿಜೆಪಿ ಅವರನ್ನು ಬೆಂಬಲಿಸಲಿಲ್ಲ. ಆದರೆ, ನಮ್ಮ ಪಕ್ಷ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೂಲಕ ಗೌರವ ನೀಡಿದೆ ಎಂದು ಅಲ್ಕಾ ಲಂಬಾ ಹೇಳಿದರು.
ರಾಜಕೀಯ ಪಕ್ಷಗಳು ರಾಷ್ಟ್ರವ್ಯಾಪಿ ಸದಸ್ಯತ್ವ ಅಭಿಯಾನ ಆರಂಭಿಸಿವೆ. ಕಾಂಗ್ರೆಸ್ ಕೂಡ ಅಭಿಯಾನ ನಡೆಸುತ್ತಿದ್ದು, ಕೇವಲ20 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮಹಿಳಾ ವಿಭಾಗದಲ್ಲಿ ಸದಸ್ಯತ್ವ ಪಡೆದಿದ್ದಾರೆ ಎಂದು ಶನಿವಾರ ತಿಳಿಸಿದೆ.