image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಬಲ ನೀಡಿ, ನೀಡದಿರಿ ನಾವು ಯುದ್ಧ ಗೆದ್ದು ನಾಗರಿಕತೆಯನ್ನು ರಕ್ಷಿಸುತ್ತೇವೆ : ಇಸ್ರೇಲ್

ಬೆಂಬಲ ನೀಡಿ, ನೀಡದಿರಿ ನಾವು ಯುದ್ಧ ಗೆದ್ದು ನಾಗರಿಕತೆಯನ್ನು ರಕ್ಷಿಸುತ್ತೇವೆ : ಇಸ್ರೇಲ್

ಟೆಲ್ ಅವಿವ್ : ಶನಿವಾರ ವಿಡಿಯೋ ಸಂದೇಶದ ಮೂಲಕ ಮಾತನಾಡಿದ ನೆತನ್ಯಾಹು, ಉಗ್ರರು ಒಂದಾಗಿದ್ದಾರೆ. ಆದರೆ, ಈ ಉಗ್ರರ ಜಾಲವನ್ನು ಮಟ್ಟ ಹಾಕಬೇಕಿರುವ ದೇಶಗಳೇ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಲು ಕರೆ ನೀಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಜ್ಬುಲ್ಲಾ, ಹೌತಿ, ಹಮಾಸ್ ಹಾಗು ತನ್ನ ಇತರೆ ನಕಲಿ ಉಗ್ರವಾದಿ ಗುಂಪುಗಳ ಮೇಲೆ ಇರಾನ್ ಶಸ್ತ್ರಾಸ್ತ್ರ ಹೇರುವುದೇ? ಖಂಡಿತವಾಗಿಯೂ ಇಲ್ಲ. ಇಂಥವರನ್ನು ಮಟ್ಟ ಹಾಕುವ ಬದಲು ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕರೆ ನೀಡುವುದು ನಮಗೆ ಮಾಡುತ್ತಿರುವ ಅಗೌರವ ಎಂದು ಅವರು ಬಣ್ಣಿಸಿದ್ದಾರೆ.

ಇರಾನ್ ನೇತೃತ್ವದಲ್ಲಿ ನಮ್ಮ ವಿರುದ್ಧ ನಡೆಯುತ್ತಿರುವ ಅನಾಗರಿಕ ಮತ್ತು ಪೈಶಾಚಿಕ ಕೃತ್ಯಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಹೀಗಾಗಿ, ಜಗತ್ತಿನ ಎಲ್ಲ ನಾಗರಿಕ ದೇಶಗಳು ನಮ್ಮ ಪರ ನಿಲ್ಲಬೇಕು ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ಹೇರಬೇಕೆಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಕರೆ ನೀಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, "ನಿಮಗೆ ನಾಚಿಕೆಯಾಗಬೇಕು" ಎಂದು ಗುಡುಗಿದರು.

ನಮಗೆ ಬೆಂಬಲ ನೀಡಿ ಅಥವಾ ನೀಡದಿರಿ. ಈ ಯುದ್ಧದಲ್ಲಿ ಇಸ್ರೇಲ್ ಜಯ ಸಾಧಿಸುತ್ತದೆ. ಅಮಾನವೀಯತೆ ಮತ್ತು ಅನಾಗರಿಕತೆಯ ವಿರುದ್ಧ ಹೋರಾಡುತ್ತಾ ನಾವು ಇಡೀ ನಾಗರಿಕತೆಯನ್ನು ರಕ್ಷಿಸುತ್ತೇವೆ. ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಯುದ್ಧ ಗೆಲ್ಲುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತವೆ" ಎಂದು ಬೆಂಜಮಿನ್ ನೆತನ್ಯಾಹು ಶಪಥ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ