image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚುನಾವಣಾ ಬಾಂಡ್‌ ಯೋಜನೆ ರದ್ದು ಆದೇಶ ಮರುಪರಿಶೀಲನೆಗೆ ಸುಪ್ರೀಂಕೋರ್ಟ್​ ನಕಾರ

ಚುನಾವಣಾ ಬಾಂಡ್‌ ಯೋಜನೆ ರದ್ದು ಆದೇಶ ಮರುಪರಿಶೀಲನೆಗೆ ಸುಪ್ರೀಂಕೋರ್ಟ್​ ನಕಾರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ಧನಸಹಾಯದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ಸಂವಿಧಾನ ಬಾಹಿರ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹೀಗಾಗಿ, ಯೋಜನೆಯನ್ನ ರದ್ದು ಮಾಡಬೇಕು ಎಂದು ಸುಪ್ರೀಂಕೋರ್ಟ್​ ಈ ವರ್ಷದ ಫೆಬ್ರವರಿ 15 ರಂದು ಆದೇಶ ಹೊರಡಿಸಿತ್ತು.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್​ಗಳ ಯೋಜನೆಯನ್ನು ರದ್ದು ಮಾಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ. ಜೊತೆಗೆ ಮುಕ್ತ ನ್ಯಾಯಾಲಯದ ವಿಚಾರಣೆಗೂ ಅನುಮತಿ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್​ ಅವರ ನೇತೃತ್ವದ ಪಂಚಪೀಠವು ಫೆಬ್ರವರಿ 15 ರಂದು ಈ ತೀರ್ಪು ನೀಡಿತ್ತು. ಚುನಾವಣಾ ಬಾಂಡ್​ ಅಸಂವಿಧಾನಿಕ. ರಾಜಕೀಯ ಪಕ್ಷಗಳಿಗೆ ಬಾಂಡ್​ಗಳನ್ನು ಕೊಡುವುದನ್ನು ನಿಲ್ಲಿಸಿಬಿಡಿ ಎಂದು ಪೀಠವು ಸೂಚಿಸಿತ್ತು. ಜೊತೆಗೆ ಈವರೆಗೆ ನೀಡಲಾದ ಬಾಂಡ್​​​ಗಳು ಮತ್ತು ಅವುಗಳನ್ನು ಎನ್​​ಕ್ಯಾಶ್​ ಮಾಡಿದ್ದರ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುವಂತೆ ಸೂಚಿಸಿತ್ತು.

Category
ಕರಾವಳಿ ತರಂಗಿಣಿ