ಜೆರುಸಲೇಂ : ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿಗಳ ಮಳೆ ಸುರಿಸುತ್ತಿದ್ದು, ಪ್ರತಿಯಾಗಿ ಇಸ್ರೇಲ್ನತ್ತ ಇರಾನ್ ಸುಮಾರು 200ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದರಿಂದಾಗಿ ಪಶ್ಚಿಮ ಏಷ್ಯಾ ಮತ್ತೆ ರಣರಂಗವಾಗಿದೆ.
ಮಂಗಳವಾರ ರಾತ್ರಿ ಇರಾನ್ ಸುಮಾರು 200ಕ್ಕೂ ಅಧಿಕ ಕ್ಷಿಪಣಿಗಳನ್ನು ಇಸ್ರೇಲ್ನ ಪ್ರಮುಖ ನಗರಗಳಾದ ಟೆಲ್ ಅವಿವ್ ಮತ್ತು ಜೆರುಸಲೇಂ ಮೇಲೆ ಹಾರಿಸಿದೆ. ಇವುಗಳಲ್ಲಿ ಹಲವನ್ನು ಅಮೆರಿಕದ ನೆರವಿನೊಂದಿಗೆ ಇಸ್ರೇಲ್ ತಡೆಯುವಲ್ಲಿ ಯಶಸ್ವಿಯಾಗಿದೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಆದರೆ, ಸಾವು-ನೋವುಗಳ ವಿವರಗಳು ತಿಳಿದುಬಂದಿಲ್ಲ.
ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಪ್ರತೀಕಾರವಾಗಿ ವಾಯುದಾಳಿ ಪ್ರಾರಂಭಿಸಿದೆ ಎಂದು ಘೋಷಣೆಯ ಕೆಲವೇ ಗಂಟೆಗಳಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನಿಂದ ಉಡಾವಣೆಯಾದ ಕ್ಷಿಪಣಿಗಳು 12 ನಿಮಿಷಗಳಲ್ಲಿ ಇಸ್ರೇಲ್ ಪ್ರವೇಶಿಸಿವೆ ಎಂದು ವರದಿಯಾಗಿದೆ.
ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಲಾಗಿದೆ. ಇಸ್ರೇಲ್ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರೆ, ತನ್ನ ಪ್ರತಿಕ್ರಿಯೆ ಮತ್ತಷ್ಟು ತೀವ್ರವಾಗಿರುತ್ತದೆ ಎಂದು ಇರಾನ್ ಎಚ್ಚರಿಸಿದೆ. ಇರಾನಿನ ಕ್ಷಿಪಣಿಗಳಿಂದ ಭಯಭೀತರಾದ ಇಸ್ರೇಲ್ ಜನರು ಬಾಂಬ್ ಶೆಲ್ಟರ್‌ಗಳಿಗೆ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಕೆಲವರು ರಸ್ತೆಬದಿಯ ಸುರಕ್ಷಿತ ಸ್ಥಳಗಳಲ್ಲಿ ರಕ್ಷಣೆ ಪಡೆದಿದ್ದಾರೆ. ದೇಶಾದ್ಯಂತ ಸೈರನ್‌ಗಳು ಮೊಳಗಿವೆ.