image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿರಿಯಾದಲ್ಲಿ ಐಎಸ್​ ಉಗ್ರರ ಮೇಲೆ ಅಮೆರಿಕ ಸೇನಾಪಡೆ ವೈಮಾನಿಕ ದಾಳಿ : ಹಲವು ಭಯೋತ್ಪಾದಕರು ಹತ

ಸಿರಿಯಾದಲ್ಲಿ ಐಎಸ್​ ಉಗ್ರರ ಮೇಲೆ ಅಮೆರಿಕ ಸೇನಾಪಡೆ ವೈಮಾನಿಕ ದಾಳಿ : ಹಲವು ಭಯೋತ್ಪಾದಕರು ಹತ

ಬೈರುತ್: ಲೆಬನಾನ್​​ನ ಹಿಜ್ಬುಲ್ಲಾ ಬಂಡುಕೋರರ ಮೇಲೆ ಇಸ್ರೇಲ್​ ಮುರಿದುಬಿದ್ದಿರುವ ನಡುವೆಯೇ, ಇತ್ತ ಸಿರಿಯಾದಲ್ಲಿ ಅಮೆರಿಕ ಐಎಸ್​ ಉಗ್ರರನ್ನು ಸದೆಬಡಿದಿದೆ. ಸಿರಿಯಾದ ಮೇಲಿನ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಅಲ್ ಖೈದಾ ಜೊತೆಗೆ ಗುರುತಿಸಿಕೊಂಡಿರುವ ಸಂಘಟನೆಯ 37 ಉಗ್ರಗಾಮಿಗಳು ಹತರಾಗಿದ್ದಾರೆ. ಇದರಲ್ಲಿ ಇಬ್ಬರು ಹಿರಿಯ ಭಯೋತ್ಪಾದಕರು ಇದ್ದಾರೆ ಎಂದು ಅಮೆರಿಕ ಭಾನುವಾರ ಹೇಳಿದೆ.

ಅಪಾಯಕಾರಿ​​ ಉಗ್ರ ಸಂಘಟನೆಯಾದ ಅಲ್ ಖೈದಾ ಜೊತೆಗೆ ಗುರುತಿಸಿಕೊಂಡಿರುವ ಹುರಾಸ್ ಅಲ್ ದೀನ್ ಗುಂಪಿನ ಉಗ್ರ ನಾಯಕ ಮತ್ತು ಆತನ 8 ಸಹಚರರನ್ನು ಗುರಿಯಾಗಿಸಿಕೊಂಡು ವಾಯವ್ಯ ಸಿರಿಯಾದ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಅಷ್ಟೂ ಜನರು ಸಾವನ್ನಪ್ಪಿದ್ದಾರೆ. ಹಿರಿಯ ಉಗ್ರ ಕಮಾಂಡರ್​​ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ಎಂದು ಅಮೆರಿಕ ಸೇನೆ ತಿಳಿಸಿದೆ.

ಸಿರಿಯಾದ ರಾಜಧಾನಿಯಿಂದ ದೂರದ ಪ್ರದೇಶದ ಗೌಪ್ಯ ಸ್ಥಳದಲ್ಲಿ ಉಗ್ರ ತರಬೇತಿ ನೀಡಲಾಗುತ್ತಿದ್ದ ಶಿಬಿರದ ಮೇಲೆ ಸೆಪ್ಟೆಂಬರ್​ 16 ರಂದು ದಾಳಿ ವೈಮಾನಿಕ ದಾಳಿ ನಡೆಸಲಾಗಿತ್ತು. ಅದರಲ್ಲಿ ನಾಲ್ವರು ಸಿರಿಯನ್​ ನಾಯಕರು ಸೇರಿದಂತೆ 28 ಉಗ್ರರು ಹತರಾಗಿದ್ದರು.

ಸಿರಿಯಾದಲ್ಲಿರುವ ಅಮೆರಿಕದ ಸೇನಾಪಡೆಗಳ ಮೇಲೆ ಐಎಸ್​ ಉಗ್ರರು ದಾಳಿ ಮಾಡಿದ್ದರು. ಇದಕ್ಕೆ ವಿರುದ್ಧವಾಗಿ ಅಮೆರಿಕ ಸೇನೆ ಪ್ರತಿದಾಳಿ ನಡೆಸುತ್ತಿದೆ.

Category
ಕರಾವಳಿ ತರಂಗಿಣಿ