image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಿಂದ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‌: ಅಭೇದ್ (ABHED-ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ಸ್ ಫಾರ್ ಹೈ ಎನರ್ಜಿ ಡಿಫೀಟ್)

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದಿಂದ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್‌: ಅಭೇದ್ (ABHED-ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ಸ್ ಫಾರ್ ಹೈ ಎನರ್ಜಿ ಡಿಫೀಟ್)

ಬೆಂಗಳೂರು : ದೇಶ ಹಾಗೂ ಸೈನಿಕರ ಭದ್ರತೆಗಾಗಿ DRDO ಹೊಸ ಹೊಸ ಸುಧಾರಿತ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸುತ್ತಿದೆ. ಈ ಅನುಕ್ರಮದಲ್ಲಿ, IIT ದೆಹಲಿಯ ಸಂಶೋಧಕರ ಸಹಯೋಗದೊಂದಿಗೆ ಸಂಸ್ಥೆಯು ಅಡ್ವಾನ್ಸ್ಡ್ ಬ್ಯಾಲಿಸ್ಟಿಕ್ ಫಾರ್ ಹೈ ಎನರ್ಜಿ ಡಿಫೀಟ್ (ABHED) ಎಂಬ ಹೊಸ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದೆ.

ಜಾಕೆಟ್‌ನ ರಕ್ಷಾಕವಚ ಫಲಕಗಳು ಅಗತ್ಯವಿರುವ ಎಲ್ಲ ಸಂಶೋಧನಾ ಪರೀಕ್ಷೆಗಳಲ್ಲೂ ಪಾಸ್ ಆಗಿವೆ. ಜಾಕೆಟ್ ಗರಿಷ್ಠ ಬೆದರಿಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, 360 ಡಿಗ್ರಿ ರಕ್ಷಣೆ ಒದಗಿಸುತ್ತದೆ. ಹಾಗಾಗಿ ಇದಕ್ಕೆ 'ಅಭೇದ್ಯ' ಎಂದು ಹೆಸರಿಡಲಾಗಿದೆ.

ಡಿಆರ್‌ಡಿಒ ಇಂಡಸ್ಟ್ರಿ ಅಕಾಡೆಮಿಕ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಜಾಕೆಟ್‌ ಸಿದ್ಧಪಡಿಸಿದೆ. ಇದರ ಎರಡು ಆವೃತ್ತಿಗಳನ್ನು ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಸೈನಿಕರು 10.5 ಕೆಜಿ ತೂಕದ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಬಳಸುತ್ತಿದ್ದಾರೆ. ಈಗಿನ ಜಾಕೆಟ್‌ನ ತೂಕ ವಿದೇಶಿ ಜಾಕೆಟ್‌ಗಿಂತ 2.5 ಕೆಜಿ ಕಡಿಮೆ ಇದೆ.

ಸುಧಾರಿತ ಆಯ್ಕೆಯ ಮಾನದಂಡದ ಮ್ಯಾಟ್ರಿಕ್ಸ್‌ನ ಆಧಾರದ ಮೇಲೆ ಕೆಲವು ಭಾರತೀಯ ಕೈಗಾರಿಕೆಗಳನ್ನು ತಂತ್ರಜ್ಞಾನ ವರ್ಗಾವಣೆ ಮತ್ತು ಹ್ಯಾಂಡ್‌ಹೋಲ್ಡಿಂಗ್‌ಗಾಗಿ ಆಯ್ಕೆ ಮಾಡಲಾಗಿದೆ. ಮೂರು ಕೈಗಾರಿಕೆಗಳಿಗೆ ತಂತ್ರಜ್ಞಾನವನ್ನು ವರ್ಗಾಯಿಸಲು ಕೇಂದ್ರ ಸಜ್ಜಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ.ಕಾಮತ್ ಮಾತನಾಡಿ, "ಈ ಸಾಧನೆಗೆ DIA-CoEಯನ್ನು ಅಭಿನಂದಿಸುತ್ತೇನೆ. ಲೈಟ್ ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಡಿಆರ್‌ಡಿಒ, ಶೈಕ್ಷಣಿಕ ಮತ್ತು ರಕ್ಷಣಾ ಆರ್&ಡಿಯ ಪರಿಣಾಮಕಾರಿ ಪರಿಸರ ವ್ಯವಸ್ಥೆಗೆ ಉದಾಹರಣೆ" ಎಂದು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ