image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದನ ವಿರಾಮ ಇಲ್ಲ ಎಂದ ಇಸ್ರೇಲ್ ಲೆಬನಾನ್ ಮೇಲೆ ಮತ್ತೆ ದಾಳಿ

ಕದನ ವಿರಾಮ ಇಲ್ಲ ಎಂದ ಇಸ್ರೇಲ್ ಲೆಬನಾನ್ ಮೇಲೆ ಮತ್ತೆ ದಾಳಿ

 ಬೈರುತ್: ಪೂರ್ವ ಮತ್ತು ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಯುದ್ಧ ವಿಮಾನಗಳು ಗುರುವಾರ ತೀವ್ರ ವೈಮಾನಿಕ ದಾಳಿಯನ್ನು ಪುನರಾರಂಭಿಸಿವೆ ಎಂದು ಲೆಬನಾನ್ ಮಿಲಿಟರಿ ಮೂಲಗಳು ತಿಳಿಸಿವೆ.

ಪೂರ್ವ ಲೆಬನಾನ್​ನ ಬಾಲ್ಬೆಕ್, ಹರ್ಮೆಲ್ ಮತ್ತು ಪಶ್ಚಿಮ ಬೆಕಾ ಪ್ರದೇಶಗಳ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಬುಧವಾರ ಸುಮಾರು 70 ದಾಳಿಗಳನ್ನು ನಡೆಸಿದ್ದು, ಇದರಲ್ಲಿ ಸುಮಾರು 72 ಜನ ಸಾವಿಗೀಡಾಗಿದ್ದು, ಈವರೆಗೆ ಮೃತರ ಒಟ್ಟು ಸಂಖ್ಯೆ 620ನ್ನೂ ದಾಟಿದೆ. ಲೆಬನಾನ್ ನಾದ್ಯಂತ ಇಸ್ರೇಲ್ ನಡೆಸಿದ ಬೃಹತ್ ಬಾಂಬ್ ದಾಳಿಗೆ ಬೆದರಿ ಸುಮಾರು 5 ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ.

ಏತನ್ಮಧ್ಯೆ 21 ದಿನಗಳ ಕಾಲ ಕದನವಿರಾಮ ಘೋಷಿಸಬೇಕು ಎಂದು ಇಸ್ರೇಲ್ ಮತ್ತು ಹಿಜ್ಬುಲ್ಲಾಗೆ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಕರೆ ನೀಡಿವೆ. ಆದರೆ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಇಸ್ರೇಲ್ ಪ್ರಧಾನ ಮಂತ್ರಿಗಳ ಕಚೇರಿ, ಅಂಥ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಮತ್ತು ಲೆಬನಾನ್ ಮೇಲೆ ದಾಳಿಗಳು ಮುಂದುವರಿಯಯಲಿವೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ.

ಲೆಬನಾನ್​ನಲ್ಲಿ ಪ್ರಸ್ತಾವಿತ 21 ದಿನಗಳ ಕದನ ವಿರಾಮಕ್ಕೆ ಹಲವಾರು ಬಲಪಂಥೀಯ ಇಸ್ರೇಲಿ ನಾಯಕರು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಂತದಲ್ಲಿ ಕದನವಿರಾಮಕ್ಕೆ ಒಪ್ಪಿದರೆ ಅದರಿಂದ ಇಸ್ರೇಲ್​ ಮಿಲಿಟರಿ ಕಾರ್ಯಾಚರಣೆಗೆ ಹಿನ್ನಡೆಯಾಗಲಿದೆ ಮತ್ತು ಈ ಅವಧಿಯನ್ನು ಬಳಸಿಕೊಂಡು ಹಿಜ್ಬುಲ್ಲಾ ಉಗ್ರರು ಮರು ಸಂಘಟನೆಯಾಗಬಹುದು ಎಂದು ಅವರು ವಾದಿಸಿದ್ದಾರೆ. ಈಗ ಕದನವಿರಾಮಕ್ಕೆ ಒಪ್ಪುವುದು ಎಂದರೆ ಹಿಜ್ಬುಲ್ಲಾಗೆ ಶರಣಾದಂತೆ ಎಂದು ನೆತನ್ಯಾಹು ಅವರ ಲಿಕುಡ್ ಪಕ್ಷದ ಸಂಸತ್ ಸದಸ್ಯ ನಿಸ್ಸಿಮ್ ವಟುರಿ ಹೇಳಿದ್ದಾರೆ.

Category
ಕರಾವಳಿ ತರಂಗಿಣಿ