image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾ ಮಳೆಗೆ ಮುಂಬೈ ತತ್ತರ

ಮಹಾ ಮಳೆಗೆ ಮುಂಬೈ ತತ್ತರ

ಮುಂಬೈ: ಬುಧವಾರ ಸಂಜೆ ಸುರಿದ ಮಹಾ ಮಳೆಗೆ ತತ್ತರಿಸಿರುವ ಮುಂಬೈ ಮಂದಿ ಇಂದು ಟ್ರಾಫಿಕ್​ ಸಮಸ್ಯೆಗೆ ಹೈರಾಣಾದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳಿಗಳ ಮೇಲೆಲ್ಲಾ ನೀರು ನಿಂತು ಲೋಕಲ್​ ಟ್ರೈನ್​ಗಳ ಸಂಚಾರ ಬಂದ್​ ಆಗಿದೆ. 14 ವಿಮಾನಗಳ ಮಾರ್ಗ ಬದಲಾಯಿಲಾಗಿದೆ.

ಥಾಣೆ, ಪಾಲ್ಘಾರ್​ ಮತ್ತು ರಾಯ್​ಗಢದಲ್ಲಿ ಇಂದೂ ಕೂಡ ಮಳೆ ಮುಂದುವರೆದಿದೆ. ಮುಂಬೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ ರೆಡ್​ ಅಲರ್ಟ್​ ಘೋಷಿಸಿದೆ.

ಬೃಹನ್ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್​ ಇಂದು ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿದೆ. ಥಾಣೆ, ಪಾಲ್ಘಾರ್​ನಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಜನರು ಸಾಧ್ಯವಾದಷ್ಟು ಮನೆಯಲ್ಲೇ ಇರುವಂತೆ ತಿಳಿಸಲಾಗಿದೆ. ಈ ಕುರಿತು ಬಿಎಂಸಿ ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿದ್ದು, ಅಗತ್ಯವಿಲ್ಲದಿದ್ದರೆ ಮನೆಯಿಂದ ಹೊರಬರಬೇಡಿ ಎಂದಿದೆ.

ಬುಧವಾರ ಸುರಿದ ಧಾರಾಕಾರ ಮಳೆಗೆ ಅಂಧೇರಿಯಲ್ಲಿ 45 ವರ್ಷದ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐದು ಗಂಟೆಗಳಷ್ಟು ಕಾಲ ಸತತವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ನದಿಗಳಂತಾಗಿದ್ದು, ಹಲವು ಪ್ರದೇಶದಲ್ಲಿ 100 ಮಿಲಿಮೀಟರ್ ಮಳೆಯಾಗಿದೆ.

Category
ಕರಾವಳಿ ತರಂಗಿಣಿ