image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಧಿಕಾರದಲ್ಲಿದ್ದಾಗ ಜಾತಿಗಣತಿ ನಡೆಸದ ಕಾಂಗ್ರೆಸ್​ ಮೀಸಲಾತಿ ವಿರೋಧಿ: ಮಾಯಾವತಿ

ಅಧಿಕಾರದಲ್ಲಿದ್ದಾಗ ಜಾತಿಗಣತಿ ನಡೆಸದ ಕಾಂಗ್ರೆಸ್​ ಮೀಸಲಾತಿ ವಿರೋಧಿ: ಮಾಯಾವತಿ

ಲಖನೌ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ, ಎಸ್​ಸಿ, ಎಸ್​ಟಿ ಮತ್ತು ಒಬಿಸಿ ಮೀಸಲಾತಿ ನೀತಿಯ ಬಗ್ಗೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ನಿಲುವು ಬೂಟಾಟಿಕೆಯಿಂದ ಕೂಡಿದ್ದು, ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಮೀಸಲಾತಿ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮಾಯಾವತಿ, ಒಂದು ಕಡೆ ಅವರು ಶೇಕಡಾ 50 ರಷ್ಟು ಮೀಸಲಾತಿಯನ್ನು ಬೆಂಬಲಿಸಿದರೆ, ಮತ್ತೊಂದೆಡೆ ಅವರು ಮೀಸಲಾತಿಯನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಾಯಾವತಿ, "ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ಎಸ್​ಸಿ, ಎಸ್​ಟಿ, ಒಬಿಸಿ ಮೀಸಲಾತಿ ನೀತಿ ಸ್ಪಷ್ಟವಾಗಿಲ್ಲ. ಅದು ದ್ವಿಮುಖ ನೀತಿ ಮತ್ತು ಮೋಸದಿಂದ ಕೂಡಿದೆ. ತಮ್ಮ ದೇಶದಲ್ಲಿರುವಾಗ ಮತಗಳಿಗಾಗಿ ಅವರು ಮೀಸಲಾತಿಯನ್ನು ಬೆಂಬಲಿಸುತ್ತಾರೆ ಮತ್ತು ಅದನ್ನು ಶೇಕಡಾ 50 ಕ್ಕಿಂತ ಹೆಚ್ಚಿಸಬೇಕು ಎಂದು ಪ್ರತಿಪಾದಿಸುತ್ತಾರೆ. ಆದರೆ, ವಿದೇಶಕ್ಕೆ ಹೋದಾಗ ಮಾತ್ರ ಅವರು ಮೀಸಲಾತಿ ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಾರೆ. ಜನರು ಇಂಥ ದ್ವಂದ್ವ ನೀತಿಯ ಬಗ್ಗೆ ಜಾಗರೂಕರಾಗಿರಬೇಕು." ಎಂದು ಬರೆದಿದ್ದಾರೆ.

Category
ಕರಾವಳಿ ತರಂಗಿಣಿ