image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉತ್ತರ ಕೊರಿಯಾ ಜಂಕ್ ಅಥವಾ ಕಸದ ಬಲೂನ್‌ಗಳನ್ನು ಕಳುಹಿಸುವ ಮೂಲಕ ದಕ್ಷಿಣ ಕೊರಿಯಾದ ವಿಮಾನಗಳ ಹಾರಾಟಕ್ಕೆ ಅಡಚಣೆ

ಉತ್ತರ ಕೊರಿಯಾ ಜಂಕ್ ಅಥವಾ ಕಸದ ಬಲೂನ್‌ಗಳನ್ನು ಕಳುಹಿಸುವ ಮೂಲಕ ದಕ್ಷಿಣ ಕೊರಿಯಾದ ವಿಮಾನಗಳ ಹಾರಾಟಕ್ಕೆ ಅಡಚಣೆ

ದಕ್ಷಿಣ ಕೊರಿಯಾ: ಉತ್ತರ ಕೊರಿಯಾ ಕಳುಹಿಸಿದ ಕಸದ ಬಲೂನ್‌ಗಳು 'ಸಣ್ಣ ಸಮಸ್ಯೆ' ಎಂದು ದಕ್ಷಿಣ ಕೊರಿಯಾ ಭಾವಿಸಿತ್ತು. ಆದರೆ ಇದೀಗ ಬಹುದೊಡ್ಡ ಸಮಸ್ಯೆಯಾಗಿ ಬದಲಾಗುತ್ತಿದೆ. ಶೀಘ್ರದಲ್ಲೇ ದಕ್ಷಿಣ ಕೊರಿಯಾದ ವಾಯುಯಾನ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಗೋಚರಿಸಿದೆ. ಏಕೆಂದರೆ, ಈಗಾಗಲೇ ಹಲವು ಬಾರಿ ರಾಜಧಾನಿ ಸಿಯೋಲ್‌ನಲ್ಲಿರುವ ಎರಡು ಪ್ರಮುಖ ವಿಮಾನ ನಿಲ್ದಾಣಗಳ ರನ್‌ವೇಗಳನ್ನೇ ಮುಚ್ಚಲಾಗಿದೆ.

ದಕ್ಷಿಣ ಕೊರಿಯಾ: ಡೆಮಾಕ್ರಟಿಕ್ ಪಕ್ಷದ ಸದಸ್ಯ ಯಂಗ್ ಬೂ ನಾಮ್ ಪ್ರತಿಕ್ರಿಯಿಸಿ, "ಜೂನ್ 1ರಿಂದ ಇಚಿಯಾನ್ ಮತ್ತು ಗಿಂಪೊ ವಿಮಾನ ನಿಲ್ದಾಣಗಳ ಕೆಲವು ಅಥವಾ ಎಲ್ಲ ರನ್‌ವೇಗಳನ್ನು ಸುಮಾರು 20 ದಿನಗಳವರೆಗೆ ಮುಚ್ಚಬೇಕಾಯಿತು. ಆ ಸಮಯದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಸ್ಯೆಯಾಯಿತು. ಒಟ್ಟು 413 ನಿಮಿಷಗಳ ಕಾಲ (ಆರು ಗಂಟೆಗಳಿಗೂ ಹೆಚ್ಚು) ನಮ್ಮ ವಿಮಾನ ಸೇವೆಗಳು ಅಸ್ತವ್ಯಸ್ತಗೊಂಡವು" ಎಂದು ಹೇಳಿದ್ದಾರೆ. ಇಚಿಯಾನ್ ವಿಶ್ವದ 5ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎಂಬುದು ಗಮನಾರ್ಹ.

ಮೇ ಅಂತ್ಯದಿಂದ ಉತ್ತರ ಕೊರಿಯಾ ಸಾವಿರಾರು ಕಸ ತುಂಬಿದ ಬಲೂನ್‌ಗಳನ್ನು ದಕ್ಷಿಣ ಕೊರಿಯಾದ ವಾಯುಪ್ರದೇಶಕ್ಕೆ ಹಾರಿಸುತ್ತಿದೆ. ಇತ್ತೀಚೆಗೆ ಇವುಗಳ ಸಂಖ್ಯೆ 5,500 ಮೀರಿದೆ ಎಂದು ಅಂದಾಜಿಸಲಾಗಿದೆ. ಈ ಬಲೂನುಗಳು ಪ್ರಚಾರದ ಕರಪತ್ರಗಳನ್ನೂ ಸಹ ಒಳಗೊಂಡಿರುತ್ತವೆ. ದೇಶದ ಅಧ್ಯಕ್ಷರ ವಸತಿ ಆವರಣದಲ್ಲೂ ಈ ಬಲೂನ್​ಗಳು ಹಾರಾಡಿ ಸಂಚಲನ ಮೂಡಿಸಿದ್ದವು. ಅಷ್ಟೇ ಅಲ್ಲ, ವಿಮಾನ ನಿಲ್ದಾಣದ ರನ್‌ವೇ ಮೇಲೂ ಬಲೂನ್‌ಗಳು ಬಿದ್ದು ಆತಂಕ ಸೃಷ್ಟಿಯಾಗಿತ್ತು.

Category
ಕರಾವಳಿ ತರಂಗಿಣಿ