image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯಾಷನಲ್​ ಲಿಬರೇಷನ್​ ಫ್ರಂಟ್​ ಆಫ್​ ತ್ರಿಪುರಾ ಮತ್ತು ಆಲ್​ ತ್ರಿಪುರಾ ಟೈಗರ್​ ಫೋರ್ಸ್​ ಉಗ್ರರು ಶಸಾಸ್ತ್ರ ತ್ಯಜಿಸಲು ನಿರ್ಧಾರ.

ನ್ಯಾಷನಲ್​ ಲಿಬರೇಷನ್​ ಫ್ರಂಟ್​ ಆಫ್​ ತ್ರಿಪುರಾ ಮತ್ತು ಆಲ್​ ತ್ರಿಪುರಾ ಟೈಗರ್​ ಫೋರ್ಸ್​ ಉಗ್ರರು ಶಸಾಸ್ತ್ರ ತ್ಯಜಿಸಲು ನಿರ್ಧಾರ.

ತ್ರಿಪುರ : ಮಹತ್ವದ ಬೆಳವಣಿಗೆಯಲ್ಲಿ ನ್ಯಾಷನಲ್​ ಲಿಬರೇಷನ್​ ಫ್ರಂಟ್​ ಆಫ್​ ತ್ರಿಪುರಾ (ಎನ್​ಎಲ್​ಎಫ್​ಟಿ) ಮತ್ತು ಆಲ್​ ತ್ರಿಪುರಾ ಟೈಗರ್​ ಫೋರ್ಸ್​ (ಎಟಿಟಿಎಫ್​) ಸಂಘಟನೆಗಳ 400 ಉಗ್ರರು ತಮ್ಮ ಶಸ್ತ್ರಾಸ್ತ್ರ ತ್ಯಜಿಸಲು ತೀರ್ಮಾನಿಸಿದ್ದಾರೆ. ಸೆಪಹಿಜಾಲಾ ಜಿಲ್ಲೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರೆದುರು ಶಸಾಸ್ತ್ರ ತ್ಯಜಿಸಲಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿದೆ.

ದೆಹಲಿಯಲ್ಲಿ ಸೆಪ್ಟಂಬರ್​ 4ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.

ಎನ್​ಎಲ್​ಎಫ್​ಟಿ ಮತ್ತು ಎಟಿಟಿಎಫ್​ನ ನಾಲ್ನೂರು ಮಂದಿ ಜಂಪೂಯಿಜಾಲಾದಲ್ಲಿರುವ ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್)ನ 7ನೇ ಬೆಟಾಲಿಯನ್‌ನ ಪ್ರಧಾನ ಕಚೇರಿಯಲ್ಲಿ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಲಿದ್ದಾರೆ ಎಂದು ಗೃಹ ಇಲಾಖೆ ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ