ನವದೆಹಲಿ: ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಒಕ್ಕೂಟದ ಅನುರಾ ಕುಮಾರ್ ದಿಸ್ಸನಾಯಕೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಇಂದು ಕೊಲೊಂಬೋದಾ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶನಿವಾರ ನಡೆದ ಶ್ರೀಲಂಕಾ ಚುನಾವಣೆಯಲ್ಲಿ ದಿಸ್ಸನಾಯಕ್ 5.6 ಮಿಲಿಯನ್ ಮತಗಳನ್ನು, ಅಂದರೆ ಶೇ 42.3ರಷ್ಟು ಮತಗಳನ್ನು ಪಡೆದುಕೊಂಡು ಎರಡನೇ ಪ್ರಾಶಸ್ತ್ಯದ ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ತಮ್ಮ ಎದರುರಾಳಿ ಎಸ್ಜೆಪಿಯ ಸಜಿತ್ ಪ್ರೇಮ್ದಾಸ ವಿರುದ್ಧ ಒಂದು ಮಿಲಿಯನ್ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆದ್ದು ಅಧ್ಯಕ್ಷ ಪಟ್ಟಕ್ಕೇರಿದ್ದಾರೆ. ಇನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ರನಿಲ್ ವಿಕ್ರಮಸಿಂಘೆ 2.3 ಮಿಲಿಯನ್ ಮತ ಅಂದರೆ ಶೇ 17,3ರಷ್ಟು ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.
2014ರಲ್ಲಿ ಹೃದಯಾಘಾತದಿಂದ ಅಮರಸಿಂಘೆ ನಿಧನದ ಬಳಿಕ ದಿಸ್ಸನಾಯಕೆ ಜೆವಿಪಿ ನಾಯಕತ್ವವನ್ನು ಪಡೆದರು. ದಿಸ್ಸನಾಯಕೆ ನಾಯಕತ್ವದಲ್ಲಿ ಜೆವಿಪಿಯು ಪ್ರಾಜಾಸತಾತ್ಮಕ ಸಾಮಾಜೀಕರಣದತ್ತ ಸಾಗಿ, ಉತ್ತಮ ಆಡಳಿತ, ಮಾನವ ಹಕ್ಕು, ಭ್ರಷ್ಟಾಚಾರ ವಿರೋಧಿ ಮತ್ತು ಬಡತನ ನಿರ್ಮೂಲನೆಯಂತಹ ವಿಷಯಕ್ಕೆ ಹೆಚ್ಚಿನ ಗಮನ ಹರಿಸಿದರು.
ಭಾರತ ಮತ್ತು ಶ್ರೀಲಂಕಾದ ಸಂಬಂಧವೂ ಸಾಂಸ್ಕೃತಿಕ, ಧಾರ್ಮಿಕ ಮತ್ತು ಭಾಷಿಕ ಸಂವಹನದ ಪರಂಪರೆಯಿಂದ ಗುರುತಿಸಿಕೊಂಡಿದ್ದು, ವ್ಯಾಪಾರ ಮತ್ತು ಹೂಡಿಕೆಗಳು ಎರಡೂ ರಾಷ್ಟ್ರಗಳ ನಡುವೆ ಬೆಳವಣಿಗೆ ಕಂಡಿದ್ದು, ಅಭಿವೃದ್ಧಿ, ಶಿಕ್ಷಣ, ಸಂಸ್ಕೃತಿ ಮತ್ತು ರಕ್ಷಣೆ ಕ್ಷೇತ್ರದಲ್ಲಿ ಸಹಕಾರವಿದೆ. ಮುಂದೆ ಹೇಗೆ ಸಂಬಂಧ ಮುಂದುವರಿಯುವುದೋ ಕಾದು ನೋಡಬೇಕಾಗಿದೆ.