ಕೊಲೊಂಬೊ: 2022ರಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದ್ದ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಈ ನಿರ್ಣಾಯಕ ಚುನಾವಣೆಗಾಗಿ ಲಕ್ಷಾಂತರ ಶ್ರೀಲಂಕಾದ ಜನರು ಬಿರುಸಿನ ಮತದಾನದಲ್ಲಿ ಭಾಗಿಯಾಗಿದ್ದಾರೆ.ಅ
ಅಧ್ಯಕ್ಷ ರನಿಲ್ ವಿಕ್ರಮಸಿಂಘೆ 'ಇದು ಪರೀಕ್ಷೆಯಾಗಿದ್ದು, ಜನರು ಮತ್ತೊಮ್ಮೆ ನಮ್ಮ ಮೇಲೆ ಭರವಸೆಯನ್ನು ಇಟ್ಟು ಆಯ್ಕೆ ಮಾಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷೀಯ ಚುನಾವಣೆಯಲ್ಲಿ 17 ಮಿಲಿಯನ್ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ, 13,400 ಮತಕ್ಷೇತ್ರ ನಿರ್ಮಾಣ ಮಾಡಲಾಗಿದ್ದು, 2,00,00 ಅಧಿಕಾರಿಗಳು ಚುನಾವಣೆಗೆ ನೇಮಿಸಲಾಗಿದೆ. ಇದರಲ್ಲಿ ಮತದಾನ ಸರಾಗವಾಗಿ ನಡೆಸುವ ಉದ್ದೇಶದಿಂದ 63,000 ಪೊಲೀಸ್ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 4ಕ್ಕೆ ಮುಕ್ತಾಯವಾಗಲಿದೆ. ಫಲಿತಾಂಶ ಭಾನುವಾರ(ಸೆ.22) ಹೊರಬೀಳುವ ನಿರೀಕ್ಷೆ ಇದೆ.