image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಗುಜರಾತ್​​ನಲ್ಲಿ ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ

ಗುಜರಾತ್​​ನಲ್ಲಿ ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ

ನವದೆಹಲಿ: ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬಳಿಕ ಗುಜರಾತ್​ನಲ್ಲೂ ರೈಲು ಹಳಿ ತಪ್ಪಿಸುವ ಪ್ರಯತ್ನವೊಂದು ನಡೆದಿದ್ದು, ಅದೃಷ್ಟವಶಾತ್​ ಇದು ವಿಫಲವಾಗಿದೆ. ಗುಜರಾತ್​ನ ಸೂರತ್​ನಲ್ಲಿ ಹಳಿಗಳ ಮೇಲಿನ ಫಿಶ್​ ಪ್ಲೇಟ್​ ಮತ್ತು ಕೀಗಳನ್ನು ಕಿತ್ತು ಹಾಕಿ ರೈಲು ಅಪಘಾತಕ್ಕೆ ಸಂಚು ರೂಪಿಸುವ ಪ್ರಕರಣ ಬೆಳಕಿಗೆ ಬಂದಿದೆ.

ಸೂರತ್​ನ ಕಿಮ್​ ಜಂಕ್ಷನ್​ ರೈಲು ನಿಲ್ದಾಣದ ಬಳಿ ಶನಿವಾರ ಮುಂಜಾನೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗ್ಗೆ 5ಗಂಟೆ ಸುಮಾರಿಗೆ ಟ್ರ್ಯಾಕ್​ ಮ್ಯಾನ್​ ಹಳಿ ಪರಿಶೀಲಿಸುವಾಗ, ಈ ದುಷ್ಕೃತ್ಯ ಬಯಲಾಗಿದೆ.

ತಕ್ಷಣಕ್ಕೆ ಈ ಕುರಿತು ಸ್ಟೇಷನ್​ ಮಾಸ್ಟರ್​ ಮತ್ತು ರೈಲ್ವೆ ಸುರಕ್ಷಾ ದಳ (ಆರ್​ಪಿಎಫ್​)ಗೆ ಸುದ್ದಿ ತಲುಪಿಸಲಾಗಿದೆ. ರೈಲುಗಳ ಸೇವೆಯಲ್ಲಿ ಯಾವುದೇ ರೀತಿ ವ್ಯತ್ಯಯವಾಗದಂತೆ ತಕ್ಷಣಕ್ಕೆ ಇದರ ದುರಸ್ತಿ ಕಾರ್ಯ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ರೈಲು ಹಳಿ ತಪ್ಪಿಸುವ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಅದೇ ರೀತಿ ದೃಷ್ಕೃತ್ಯದ ಯತ್ನ ನಡೆಸಲಾಗಿದೆ.

ಸೆಪ್ಟೆಂಬರ್​ 10ರಂದು ರಾಜಸ್ಥಾನದ ಅಜ್ಮೇರ್‌ನಲ್ಲಿ ಸರಧಾನ ಮತ್ತು ಬಂಗಧ್ ನಡುವಿನ ರೈಲ್ವೆ ಹಳಿಗಳ ಮೇಲೆ 100 ಕೆಜಿ ತೂಕದ ಎರಡು ಸಿಮೆಂಟ್​ ಬ್ಲಾಕ್​ ಇರಿಸಲಾಗಿತ್ತು. ಈ ಸಿಮೆಂಟ್​ ಬ್ಲಾಕ್​ಗೆ ಗೂಡ್ಸ್​ ರೈಲು​ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಭಾರೀ ಪ್ರಮಾದ ತಪ್ಪಿತ್ತು.

Category
ಕರಾವಳಿ ತರಂಗಿಣಿ