ಮಹಾರಾಷ್ಟ್ರ : ಪ್ರಧಾನಿ ಮೋದಿ ಶುಕ್ರವಾರ ಫಲಾನುಭವಿಗಳಿಗೆ 'ಪ್ರಧಾನಿ ವಿಶ್ವಕರ್ಮ' ಯೋಜನೆ ಅಡಿ ಸಾಲ ವಿತರಿಸಿದರು. ಅವರು ಅಮರಾವತಿಯಲ್ಲಿ 'ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪರೆಲ್ (ಪಿಎಂ ಮಿತ್ರ) ಪಾರ್ಕ್ಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತನಾಡಿದ ಮೋದಿ, ‘ಈ ಯೋಜನೆ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳು ಒಗ್ಗೂಡಿ ಈ ವರ್ಷ 20 ಲಕ್ಷಕ್ಕೂ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. 8 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. 60 ಸಾವಿರ ಜನರಿಗೆ ಒಂದು ವರ್ಷದಲ್ಲಿ 3 ಲಕ್ಷದವರೆಗೆ ಹೊಸ ತಂತ್ರಜ್ಞಾನ ಕಲಿಸಲಾಗುತ್ತಿದೆ ಎಂದರು.
‘ಹಿಂದಿನ ಸರ್ಕಾರ (ಅಘಾಡಿ) ವಿಶ್ವಕರ್ಮ ಬಂಧುಗಳ ಬಗ್ಗೆ ಚಿಂತಿಸಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು. ಎಸ್.ಟಿ., ಎಸ್.ಸಿ. ಮತ್ತು ಹಿಂದುಳಿದ ವರ್ಗದ ಸಮುದಾಯಗಳು ವಿಶ್ವಕರ್ಮ ಕುಶಲಕರ್ಮಿಗಳಾಗಬೇಕು, ಅವರಿಗೆ 'ಎಂಎಸ್‌ಎಂಇ' ಸ್ಥಾನಮಾನ ನೀಡಬೇಕು ಮತ್ತು ಈ ಯೋಜನೆಗೆ ಸ್ಕಿಲ್ ಇಂಡಿಯಾ ಮಿಷನ್ ಸಹಾಯ ಮಾಡುತ್ತಿದೆ ಎಂದು ಭರವಸೆ ನೀಡಿದರು.
ವಾರ್ದಾದ ಜವಳಿ ಕ್ಷೇತ್ರದ ಕೈಗಾರಿಕೆಗಳು ಮತ್ತೊಮ್ಮೆ ಭಾರತವನ್ನು ಹೆಮ್ಮೆಪಡುವಂತೆ ಮಾಡಿವೆ. ಈ ಹಿಂದೆ ಸರ್ಕಾರವು ವಿಶ್ವಕರ್ಮ ಕಾರ್ಮಿಕರನ್ನು ಕಡೆಗಣಿಸಿದೆ. ವಿಶ್ವಕರ್ಮ ಕಾರ್ಮಿಕರ ಜೀವನಮಟ್ಟವನ್ನು ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು.