ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಪುಣೆಗೆ ಸೆ.18 ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಲಿದ್ದು, ಸೆ.16ರಂದು ಪ್ರಧಾನಿ ಮೋದಿ ವರ್ಚುಯಲ್ ಸಮಾರಂಭದ ಮೂಲಕ ವಂದೇ ಭಾರತ್ ರೈಲಿನ ಉದ್ಘಾಟನೆ ಮಾಡುವರು.
ವಾರದಲ್ಲಿ ಮೂರು ಬಾರಿ (ಬುಧವಾರ, ಶುಕ್ರವಾರ ಹಾಗೂ ಭಾನುವಾರ) ಹುಬ್ಬಳ್ಳಿಯಿಂದ ಮತ್ತು ಗುರುವಾರ, ಶನಿವಾರ, ಸೋಮವಾರದಂದು ಪುಣೆಯಿಂದ ಹುಬ್ಬಳ್ಳಿಗೆ ಎಕ್ಸ್ಪ್ರೆಸ್ ರೈಲು ಸಂಚರಿಸಲಿದೆ.
ವಂದೇ ಭಾರತ ರೈಲು ನಿಲುಗಡೆಯಾಗುವ ನಗರಗಳ ಮಧ್ಯದ ದರವನ್ನು ನಿಗದಿಪಡಿಸಿದ್ದು, ದರಪಟ್ಟಿಯನ್ನು ರೈಲ್ವೆ ಇಲಾಖೆಯು ಪ್ರಕಟಿಸಿದೆ. ಚೇರ್ ಕಾರು ಟಿಕೆಟ್ ದರ ಹಾಗೂ ಕ್ಯಾಟರಿಂಗ್ ಹಾಗೂ ನಾನ್ ಕ್ಯಾಟರಿಂಗ್ ಒಳಗೊಂಡಂತೆ ಹಾಗೂ ಎಕ್ಸಿಕ್ಯೂಟಿವ್ ಟಿಕೆಟ್ ದರ ಹಾಗೂ ಕೆಟರಿಂಗ್ ರೇಟ್ ಒಳಗೊಂಡಂತೆ ಟಿಕೆಟ್ ದರ ಪ್ರಕಟಿಸಿದೆ.