image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದ ಮಾತ್ರಕ್ಕೆ ಆರೋಪಿಗಳ ಆಸ್ತಿ ಧ್ವಂಸಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಸುಪ್ರೀಂ

ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದ ಮಾತ್ರಕ್ಕೆ ಆರೋಪಿಗಳ ಆಸ್ತಿ ಧ್ವಂಸಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಸುಪ್ರೀಂ

ನವದೆಹಲಿ: "ಬುಲ್ಡೋಜರ್ ನ್ಯಾಯ" ದ ಬಗ್ಗೆ ತನ್ನದೇ ಅಭಿಪ್ರಾಯ ಹೇಳಿದ್ದ ಸುಪ್ರೀಂಕೋರ್ಟ್​, ಇಂದು ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂದ ಮಾತ್ರಕ್ಕೇ ಆಸ್ತಿಯನ್ನು ಧ್ವಂಸ ಮಾಡಲು ಆಡಳಿತಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದೆ. ನೆಲದ ಕಾನೂನುಗಳ ಆಧಾರದ ಮೇಲೆ ಆಡಳಿತಗಳು ನಡೆದುಕೊಳ್ಳಬೇಕಿದೆ ಎಂದು ಅದು ಹೇಳಿದೆ.

ಈ ಬಗೆಗಿನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಸುಧಾಂಶು ಧುಲಿಯಾ ಮತ್ತು ಎಸ್‌ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು “ ಸರ್ಕಾರದ ಆಡಳಿತದ ಕ್ರಮಗಳು ಕಾನೂನಿನ ಅಡಿ ನಿಯಂತ್ರಿಸಲ್ಪಡುತ್ತಿವೆ. ಇಂತಹ ಸಂದರ್ಭದಲ್ಲಿ, ಕುಟುಂಬದ ಸದಸ್ಯನೊಬ್ಬ ಕಾನೂನು ಉಲ್ಲಂಘನೆ ಮಾಡಿದರೆ, ಅವರ ಕುಟುಂಬದ ಇತರ ಸದಸ್ಯರು ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ನಿರ್ಮಿಸಲಾದ ನಿವಾಸವು ಅಪರಾಧದಲ್ಲಿ ಭಾಗಿಯಾಗಿರುವುದಕ್ಕಾಗಿ ಅವರ ಆಸ್ತಿಯನ್ನು ಕೆಡವಲು ಆಧಾರವಾಗುವುದಿಲ್ಲ ಎಂದು ಹೇಳಿದೆ. "ಇದಲ್ಲದೆ, ಆಪಾದಿತರ ಅಪರಾಧವನ್ನು ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ಸಾಬೀತುಪಡಿಸಬೇಕು. ಕಾನೂನೇ ಸರ್ವೋಚ್ಚವಾಗಿರುವ ರಾಷ್ಟ್ರದಲ್ಲಿ ಇಂತಹ ಧ್ವಂಸ ಬೆದರಿಕೆಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ಕೂಡಾ ನೀಡಿದೆ.

Category
ಕರಾವಳಿ ತರಂಗಿಣಿ