image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಧಾನಿ ಮೋದಿ ಅವರ 74ನೇ ಜನ್ಮದಿನದ ಹಿನ್ನೆಲೆ ಅಜ್ಮೀರ್​ ಶರೀಫ್ ದರ್ಗಾದಲ್ಲಿ ಸಸ್ಯಾಹಾರ ಅನ್ನ ದಾಸೋಹ

ಪ್ರಧಾನಿ ಮೋದಿ ಅವರ 74ನೇ ಜನ್ಮದಿನದ ಹಿನ್ನೆಲೆ ಅಜ್ಮೀರ್​ ಶರೀಫ್ ದರ್ಗಾದಲ್ಲಿ ಸಸ್ಯಾಹಾರ ಅನ್ನ ದಾಸೋಹ

ನವದೆಹಲಿ: ಸೆಪ್ಟೆಂಬರ್​ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಅಜ್ಮೀರ್​​ ಶರೀಫ್​ ದರ್ಗಾದಲ್ಲಿ 4,000 ಕೆಜಿ ಸಸ್ಯಾಹಾರದ ದಾಸೋಹ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಈ ಕುರಿತು ದರ್ಗಾದ ಅಧಿಕಾರಿಗಳು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಧಾನಿ ಮೋದಿ ಅವರ 74ನೇ ಜನ್ಮದಿನದ ಹಿನ್ನಲೆ ಅಜ್ಮೀರ್​ ಶರೀಫ್ ದರ್ಗಾದಲ್ಲಿ ಸಸ್ಯಾಹಾರ ಅನ್ನ ದಾಸೋಹ (ಲಾಂಗರ್​) ನಡೆಸಲಾಗುವುದು. ದೇಶದ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಕ್ಕಿ ಮತ್ತು ಶುದ್ಧ ತುಪ್ಪ, ಒಣ ಹಣ್ಣುಗಳನ್ನು ಸೇರಿಸಿದ ಆಹಾರವನ್ನು ತಯಾರಿಸಿ ವಿತರಿಸಲಾಗುವುದು. ಗುರುಗಳ ಮತ್ತು ನಮ್ಮ ಸುತ್ತಲಿನ ಬಡ ಜನರಿಗೆ ಸಾಮೂಹಿಕ ಭೋಜನ ಸೇವೆಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.

 ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದಂದು ಅವರ ಸುದೀರ್ಘ ಜೀವನಕ್ಕೆ ನಾವು ಹಾರೈಸುತ್ತೇವೆ. ಈ ಸಂಪೂರ್ಣ ಸಾಮೂಹಿಕ ಆಹಾರ ದಾಸೋಹ ವ್ಯವಸ್ಥೆಯನ್ನು ಭಾರತೀಯ ಅಲ್ಪ ಸಂಖ್ಯಾತ ಫೌಂಡೇಷನ್​ ಮತ್ತು ಅಜ್ಮೀರ್​ ಶರೀಫ್​ ಚಿಸ್ತಿ ಫೌಂಡೇಷನ್​ ವತಿಯಿಂದ ಸಂಘಟಿಸಲಾಗಿದೆ ಎಂದು ಸೈಯದ್​ ಅಫ್ಸಾನ್​ ಚಿಸ್ತಿ ತಿಳಿಸಿದರು. ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ, ಭಕ್ತಿ ಮತ್ತು ಕಾಳಜಿಯಿಂದ ನಡೆಸಲಾಗುವುದು. ಈ ಮೂಲಕ ಸಾವಿರಾರು ಭಕ್ತರು ಮತ್ತು ಸಾಧಕರಿಗೆ ಸೇವೆ ಸಲ್ಲಿಸಲಾಗುವುದು. ಹಜ್ರಾತ್​ ಖ್ವಾಜಾ ಮುಯುನುದ್ದೀನ್​ ಚಿಸ್ತಿ ದರ್ಗಾದೊಳಗೆ ರಾತ್ರಿ 10.30ಕ್ಕೆ ದೊಡ್ಡದಾದ ಶಾಹಿ ದೆಗ್ (ಅಡುಗೆ ಪಾತ್ರೆ)​​ ಅನ್ನು ಬೆಳಗುವ ಮೂಲಕ ಕಾರ್ಯಕ್ರಮ ಆರಂಭಿಸಲಾಗುವುದು. ಶಾಂತಿ, ಏಕತೆ, ಸಮೃದ್ಧಿ ಮತ್ತು ಪ್ರಧಾನಿ ಅವರ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Category
ಕರಾವಳಿ ತರಂಗಿಣಿ