ಜಮ್ಮು ಮತ್ತು ಕಾಶ್ಮೀರ: ಅಡಗಿಕೊಂಡಿರುವ ಉಗ್ರರೊಂದಿಗೆ ಆರಂಭಿಕ ಸಂಪರ್ಕ ಸಾಧಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂವಿನ ಕಂಝಲ್ ಮಂದು ಪ್ರದೇಶದ ದಟ್ಟಕಾಡಿನ ಮಧ್ಯೆ ಭಯೊತ್ಪಾದಕರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳಿಂದ ಕಾರ್ಯಾಚರಣೆ ಆರಂಭವಾಗಿದೆ.ಬುಧವಾರದ ಸಂಜೆ ವೇಳೆ ಸುಮಾರು ಅರ್ಧ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯಿತು. ದಟ್ಟ ಕಾಡು ಪ್ರದೇಶವಾದರಿಂದ ಕತ್ತಲೆಯಾಗಿರುವ ಹಿನ್ನೆಲೆ ರಾತ್ರಿ ವೇಳೆ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಆದರೆ, ಪ್ರದೇಶವನ್ನು ಭದ್ರತಾ ಪಡೆಯಿಂದ ಸುತ್ತುವರೆಯಲಾಗಿತ್ತು. ಇಂದು ಮುಂಜಾನೆಯ ಬಳಿಕ ಮತ್ತೆ ಶೋಧ ಕಾರ್ಯಾಚರಣೆ ಆರಂಭವಾಗಿದೆ. ಆದರೆ, ಭಯೋತ್ಪಾದಕರು ಹಗಲಿನಲ್ಲಿ ಅರಣ್ಯ ಪ್ರದೇಶದಲ್ಲಿನ ಕತ್ತಲು ಪ್ರದೇಶವನ್ನು ಬಳಸಿಕೊಂಡು ಅವಿತುಕೊಳ್ಳುತ್ತಿದ್ದಾರೆ. ಪ್ರಸ್ತುತ ಶೋಧ ಕಾರ್ಯಾಚರಣೆ ನಡೆಯುತ್ತಿದೆ" ಎಂದು ವರದಿಯಾಗಿದೆ.
ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ವಕ್ತಾರರು ಎಕ್ಸ್ ಆ್ಯಪ್ನಲ್ಲಿ, "ಆಪರೇಶನ್ ಚತ್ರೂ - ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಿಶ್ತ್ವಾರದ ಕಂಝಲ್ ಮಂಡುವಿನಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲಾಗಿದೆ ಮತ್ತು ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ" ಎಂದು ಪೋಸ್ಟ್ ಮಾಡಿದ್ದಾರೆ.