ಜಮ್ಮು ಮತ್ತು ಕಾಶ್ಮೀರ : ಜುಲೈ 3ರಿಂದ ಪವಿತ್ರ ಅಮರನಾಥ್ ಯಾತ್ರೆ ಆರಂಭವಾಗಲಿದ್ದು, ಈ ಬಾರಿ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿನ ಗುಹಾ ದೇವಾಲಯದ ದರ್ಶನವನ್ನು ಯಾತ್ರಾರ್ಥಿಗಳು ಪಡೆಯಲಿದ್ದು, ಮಾರ್ಗ ಮಧ್ಯೆದಲ್ಲಿ ಹೈಟೆಕ್ ಗ್ಯಾಜೆಟ್ ಆಧಾರಿತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಈ ಮಾರ್ಗದಲ್ಲಿ ಸಾಗುವ ಯಾತ್ರೆಯಲ್ಲಿ ಮುಖ ಪರಿಚಯ ವ್ಯವಸ್ಥೆ (FRS) ಅನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಕೆ ಬಳಿಕ ಈಗಾಗಲೇ ಭಯೋತ್ಪಾದಕ ಸಂಘಟನೆಗೆ ಸೇರಿದ ಇಬ್ಬರನ್ನು ಜೂನ್ 19ರಂದು ಬಂಧಿಸಲಾಗಿದೆ. ಎಫ್ಆರ್ಎಸ್ ಭಯೋತ್ಪಾದನೆಯಲ್ಲಿ ತೊಡಗಿರುವ ಶಂಕಿತ ಭೂಗತ ಕಾರ್ಯಕರ್ತರು ಮತ್ತು ಬ್ಲ್ಯಾಕ್ಲಿಸ್ಟ್ ನಲ್ಲಿರುವ ವ್ಯಕ್ತಿಗಳ ಇಮೇಜ್ಗಳನ್ನು ಒಳಗೊಂಡಿದ್ದು, ಇದು ನೈಜ ಸಮಯದಲ್ಲಿ ಭದ್ರತಾ ಪಡೆಗಳನ್ನು ಎಚ್ಚರಿಸಲಿದೆ.
ಈ ಎಫ್ಆರ್ಎಸ್ನಲ್ಲಿ ಯಾವುದೇ ಬ್ಲ್ಯಾಕ್ಲಿಸ್ಟ್ ವ್ಯಕ್ತಿಗಳು ಬಂದ ತಕ್ಷಣ, ಭದ್ರತಾ ಪಡೆಗಳಿಂದ ನಿರ್ವಹಿಸಲ್ಪಡುವ ಕಣ್ಗಾವಲು ಕೇಂದ್ರದಲ್ಲಿ ಒಂದು ಎಚ್ಚರಿಕೆಯ ಸಂದೇಶ ನೀಡುತ್ತದೆ. ಇದರಿಂದಾಗಿ ತಕ್ಷಣಕ್ಕೆ ನೈಜ ಸಮಯದಲ್ಲಿ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಸಂಪೂರ್ಣ ಯಾತ್ರೆ ಸಾಗುವ ಕಾಶ್ಮೀರ ಕಣಿವೆ ಮಾರ್ಗವನ್ನು ಅಧಿಕಾರಿಗಳು ನೋ ಫ್ಲೈಯಿಂಗ್ ಝೋನ್ ಮಾಡಿದ್ದು, ಜುಲೈ 1ರಿಂದ ಆಗಸ್ಟ್ 10ರ ವರೆಗೆ ಯಾವುದೇ ಡ್ರೋನ್ ಅಥವಾ ಯುಎವಿಗಳ ಹಾರಾಟ ನಡೆಸದಂತೆ ಸೂಚನೆ ನೀಡಲಾಗಿದೆ. ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ರಕ್ಷಾಬಂಧನದ ದಿನ ಅಂದರೆ, ಆಗಸ್ಟ್ 9ರಂದು ಕೊನೆಯಾಗಲಿದೆ. 58 ದಿನಗಳ ಕಾಲ ನಡೆಯುತ್ತಿದ್ದ ಈ ಯಾತ್ರೆಯನ್ನು ಈ ಬಾರಿ 38ದಿನಗಳಿಗೆ ಸೀಮಿತಗೊಳಿಸಲಾಗಿದೆ.
ಇದರ ಜೊತೆಗೆ ಸಂಪೂರ್ಣ ಯಾತ್ರೆ ಸಾಗುವ ಕಾಶ್ಮೀರ ಕಣಿವೆ ಮಾರ್ಗವನ್ನು ಅಧಿಕಾರಿಗಳು ನೋ ಫ್ಲೈಯಿಂಗ್ ಝೋನ್ ಮಾಡಿದ್ದು, ಜುಲೈ 1ರಿಂದ ಆಗಸ್ಟ್ 10ರ ವರೆಗೆ ಯಾವುದೇ ಡ್ರೋನ್ ಅಥವಾ ಯುಎವಿಗಳ ಹಾರಾಟ ನಡೆಸದಂತೆ ಸೂಚನೆ ನೀಡಲಾಗಿದೆ. ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ವಾರ್ಷಿಕ ಅಮರನಾಥ ಯಾತ್ರೆ ಜುಲೈ 3ರಂದು ಪ್ರಾರಂಭವಾಗಲಿದ್ದು, ರಕ್ಷಾಬಂಧನದ ದಿನ ಅಂದರೆ, ಆಗಸ್ಟ್ 9ರಂದು ಕೊನೆಯಾಗಲಿದೆ. 58 ದಿನಗಳ ಕಾಲ ನಡೆಯುತ್ತಿದ್ದ ಈ ಯಾತ್ರೆಯನ್ನು ಈ ಬಾರಿ 38ದಿನಗಳಿಗೆ ಸೀಮಿತಗೊಳಿಸಲಾಗಿದೆ.