image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಕ್ಸಲರೊಂದಿಗೆ ಯಾವುದೇ ಶಾಂತಿ ಸಂಧಾನದ ಮಾತುಕತೆ ಇಲ್ಲ : ಅಮಿತ್ ಶಾ

ನಕ್ಸಲರೊಂದಿಗೆ ಯಾವುದೇ ಶಾಂತಿ ಸಂಧಾನದ ಮಾತುಕತೆ ಇಲ್ಲ : ಅಮಿತ್ ಶಾ

ಹೈದರಾಬಾದ್: "ನಕ್ಸಲರೊಂದಿಗೆ ಯಾವುದೇ ಶಾಂತಿ ಸಂಧಾನದ ಮಾತುಕತೆ ಇಲ್ಲ. ನಿಷೇಧಿತ ಸಂಘಟನೆಯ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕು. ಪೊಲೀಸರ ಮುಂದೆ ಶರಣಾಗಬೇಕು. ಸಮಾಜದ ಮುಖ್ಯವಾಹಿನಿಗೆ ಸೇರಬೇಕು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ. ತೆಲಂಗಾಣದ ನಿಜಾಮಾಬಾದ್‌ನಲ್ಲಿ ಅರಿಶಿನ ಮಂಡಳಿಯ ರಾಷ್ಟ್ರೀಯ ಪ್ರಧಾನ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, "ಮಾವೋವಾದಿಗಳೊಂದಿಗೆ ಚರ್ಚೆ ನಡೆಸುವಂತೆ ಕಾಂಗ್ರೆಸ್ ಹೇಳುತ್ತಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಜನರೊಂದಿಗೆ ಯಾವುದೇ ಮಾತುಕತೆಯ ಅಗತ್ಯವಿಲ್ಲ ಎಂಬುದು ಕೇಂದ್ರ ಸರ್ಕಾರದ ನೀತಿ. ಅವರೆಲ್ಲರೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿ ಮತ್ತು ಮುಖ್ಯವಾಹಿನಿಗೆ ಬರಬೇಕು ಎಂಬುದೇ ಅಂತಿಮ ಉದ್ದೇಶ" ಎಂದು ಹೇಳಿದರು.

"ಈಶಾನ್ಯ ರಾಜ್ಯಗಳಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ. ಅವರು ತಾಲೂಕು ಮಟ್ಟದಿಂದ ವಿಧಾನಸಭೆಗಳವರೆಗಿನ ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿಯೂ ಸ್ಪರ್ಧಿಸಿದರು. ಅದೇ ರೀತಿ, ಕಳೆದ ಒಂದೂವರೆ ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ" ಎಂದು ಮಾಹಿತಿ ನೀಡಿದರು. "ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವುದೊಂದೇ ನಕ್ಸಲರಿಗಿರುವ ಕೊನೆಯ ಹಾದಿ. ನೀವು ಶರಣಾಗದಿದ್ದರೆ, ಮಾರ್ಚ್ 31, 2026ರ ಮೊದಲು ದೇಶದಲ್ಲಿ ನಕ್ಸಲಿಸಂ ಅನ್ನು ಅಂತ್ಯ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ" ಎಂದು ಗೃಹ ಸಚಿವರು ಹೇಳಿದರು.

Category
ಕರಾವಳಿ ತರಂಗಿಣಿ