image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರದ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು 1ನೇ ತರಗತಿಯಿಂದ ಪರಿಚಯಿಸುವ ಕ್ರಮಕ್ಕೆ ವ್ಯಾಪಕ ವಿರೋಧ

ಮಹಾರಾಷ್ಟ್ರದ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು 1ನೇ ತರಗತಿಯಿಂದ ಪರಿಚಯಿಸುವ ಕ್ರಮಕ್ಕೆ ವ್ಯಾಪಕ ವಿರೋಧ

ಮುಂಬೈ: 1ನೇ ತರಗತಿಯಿಂದ ಶಾಲೆಗಳಲ್ಲಿ ಹಿಂದಿ ಹೇರಿಕೆ ವಿರುದ್ಧದ ಅಸಮಾಧಾನದ ಕೂಗು ಹೆಚ್ಚುತ್ತಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟಿಸಲು ರಾಜ್​ ಮತ್ತು ಉದ್ಧವ್​ ಠಾಕ್ರೆ ಒಂದಾಗಲು ಮುಂದಾಗಿದ್ದಾರೆ. ಸಹೋದರ ಸಂಬಂಧಿಗಳಾಗಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್​ ಠಾಕ್ರೆ ಮತ್ತು ಎಂಎನ್​ಎಸ್​ ಅಧ್ಯಕ್ಷ ರಾಜ್​ ಠಾಕ್ರೆ ಇಬ್ಬರು ತದ್ವಿರುದ್ಧ ದಿಕ್ಕುಗಳಾಗಿದ್ದರು. ಆದರೆ, ಇದೀಗ ಅವರು ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ಮರಾಠಿ ಭಾಷೆಯ ಕಾರಣದಿಂದ ಒಗ್ಗೂಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಜುಲೈ 5ರಂದು ಪ್ರಾಥಮಿಕ ಹಂತದಲ್ಲೇ ತ್ರಿಭಾಷಾ ಕಲಿಕೆ ವಿರೋಧಿಸಿ ಪ್ರತಿಭಟನೆಗೆ ವೇದಿಕೆ ಸಜ್ಜಾಗಿದ್ದು, ಯುಬಿಸಿ ಮುಖ್ಯಸ್ಥ ಉದ್ಧವ್​ ಠಾಕ್ರೆ ಮತ್ತು ಎಂಎನ್​ಎಸ್​ ಅಧ್ಯಕ್ಷ ರಾಜ್​ ಠಾಕ್ರೆ ಒಂದೇ ವೇದಿಕೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗುರುವಾರ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಬ್ಬರು ನಾಯಕರು ತ್ರಿ ಭಾಷಾ ಸೂತ್ರ ಹಾಗೂ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಜುಲೈ 7 ರಂದು ಆಜಾದ್ ಮೈದಾನದಲ್ಲಿ ನಾಗರಿಕ ಸಮಾಜ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಉದ್ಧವ್ ಠಾಕ್ರೆ ಘೋಷಿಸಿದ್ದರೆ, ಜುಲೈ 6 ರಂದು ಗಿರ್ಗಾಂವ್ ಚೌಪಟ್ಟಿಯಿಂದ ರಾಜಕೀಯೇತರ ಮೆರವಣಿಗೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಈ ಪ್ರತಿಭಟನೆಗೆ ಶಿವಸೇನೆ ಸೇರಿದಂತೆ ಎಲ್ಲಾ ರಾಜಕೀಯ ಸಂಘಟನೆಗಳ ನಾಯಕರನ್ನು ಆಹ್ವಾನಿಸುವುದಾಗಿ ರಾಜ್ ಘೋಷಿಸಿದ್ದರು.

Category
ಕರಾವಳಿ ತರಂಗಿಣಿ