ಪಾಕಿಸ್ತಾನ : 2026ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾಮ ನಿರ್ದೇಶನಕ್ಕೆ ಶಿಫಾರಸ್ಸು ಮಾಡಿದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅನೇಕ ಪಾಕಿಸ್ತಾನ ರಾಜಕೀಯ ನಾಯಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇರಾನ್ನ ಮೂರು ಪರಮಾಣು ಸೌಲಭ್ಯ ಘಟಕಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಈ ಕುರಿತು ಒತ್ತಾಯಿಸಲಾಗಿದೆ. ಈ ಬೆಳವಣಿಗೆ ಒಂದೆರಡು ದಿನಗಳ ಹಿಂದೆ ಪಾಕಿಸ್ತಾನ ಮತ್ತು ಭಾರತ ಸಂಘರ್ಷ ಸಮಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಶಾಂತಿ ಪ್ರಯತ್ನಕ್ಕೆ ಅವರಿಗೆ ಅತ್ಯುನ್ನತ ನೊಬೆಲ್ ಪ್ರಶಸ್ತಿಗೆ ಹೆಸರನ್ನು ನಿರ್ದೇಶಿಸಿ ಪಾಕಿಸ್ತಾನ ಶಿಫಾರಸು ಮಾಡಿತ್ತು.
ಇದೀಗ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಖಂಡಿಸಿದೆ. ಈ ನಡುವೆ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸು ಮಾಡಿ ನಾರ್ವೆಯಲ್ಲಿನ ಸಮಿತಿಗೆ ಕಳುಹಿಸಲಾಗಿದೆ ಎಂದಿದ್ದಾರೆ. ಈ ನಿರ್ಧಾರವನ್ನು ಮತ್ತೊಮ್ಮೆ ಪಾಕಿಸ್ತಾನ ಪುನರ್ ಪರಿಶೀಲನೆ ಮಾಡುವಂತೆ ಪಾಕಿಸ್ತಾನದ ಕೆಲವು ಪ್ರಮುಖ ರಾಜಕೀಯ ನಾಯಕರು ಒತ್ತಾಯಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಜಮಿಯತ್ ಉಲೇಮಾ ಇ ಇಸ್ಲಾಂ (ಜೆಯುಐ-ಎಫ್) ಮುಖ್ಯಸ್ಥ, ಹಿರಿಯ ರಾಜಕಾರಣಿ ಮೌಲಾನಾ ಫಜ್ಲುರ್ ರೆಹಮಾನ್, ಸರ್ಕಾರ ತನ್ನ ನಿರ್ಧಾರವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಅಧ್ಯಕ್ಷ ಟ್ರಂಪ್ ನಡೆ ಶಾಂತಿಯ ಹಕ್ಕು ಸುಳ್ಳು ಎಂದು ಸಾಬೀತು ಮಾಡಿದೆ. ಈ ಹಿನ್ನೆಲೆ ನೊಬೆಲ್ ಪ್ರಶಸ್ತಿಯ ಪ್ರಸ್ತಾಪವನ್ನು ಹಿಂಪಡೆಯಬೇಕು ಎಂದು ಪಕ್ಷಸ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಇದೇ ವೇಳೆ ಸೇನಾ ಮುಖ್ಯಸ್ಥ ಆಸೀಮ್ ಮುನಿರ್ ವಿರುದ್ಧವೂ ಟೀಕಿಸಿದ್ದಾರೆ. ಟ್ರಂಪ್ ಪ್ಯಾಲೆಸ್ತೇನ್, ಸಿರಿಯಾ, ಲೆಬನಾನ್ ಮತ್ತು ಇರಾನ್ ಮೇಲೆ ದಾಳಿಯನ್ನು ಬೆಂಬಲಿಸಿದ್ದಾರೆ. ಅದು ಹೇಗೆ ಶಾಂತಿ ಪ್ರಶಸ್ತಿಗೆ ಸಹಿ ಹಾಕಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಆಫ್ಘನ್ನರು ಮತ್ತು ಪ್ಯಾಲೆಸ್ಟೀನಿಯನ್ನರ ರಕ್ತ ಅಮೆರಿಕದ ಕೈಯಲ್ಲಿದೆ. ಹೇಗೆ ಅವರು ಶಾಂತಿಯ ಪ್ರತಿಪಾದಕರಾಗುತ್ತಾರೆ. ಗಾಜಾ ಮತ್ತು ಉಕ್ರೇನ್ ಯುದ್ಧವನ್ನು ಬೇಗ ಕೊನೆಗೊಳ್ಳಿಸಲು ಮಾತುಕತೆ ಕೌಶಲ್ಯಕ್ಕೆ ಶಾಂತಿ ಪ್ರತಿಪಾದಕ ಎಂದು ಬಳಕೆ ಮಾಡಿ ಪ್ರಚಾರ ನಡೆಸಿದ್ದಾರೆ ಎಂದು ಟೀಕಿಸಿದರು.