image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿ ಸಂಸದ ರಘುನಂದನ್ ರಾವ್ ಗೆ ಕೊಲೆ ಬೆದರಿಕೆ...

ಬಿಜೆಪಿ ಸಂಸದ ರಘುನಂದನ್ ರಾವ್ ಗೆ ಕೊಲೆ ಬೆದರಿಕೆ...

ತೆಲಂಗಾಣ : ಮೇದಕ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಘುನಂದನ್ ರಾವ್ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಕರೆಯೊಂದು ಬಂದಿದೆ.ತಾನು ಮಧ್ಯಪ್ರದೇಶದ​ ಮಾವೋವಾದಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ, ಸೋಮವಾರ ಸಂಜೆಯೊಳಗೆ ಮೇದಕ್ ಸಂಸದ ರಘುನಂದನ್ ರಾವ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿರುವುದು ಈಗ ಸಂಚಲನ ಮೂಡಿಸಿದೆ.

ಸಂಸದರು ಮೇಡ್ಚಲ್ ಜಿಲ್ಲೆಯ ದಮ್ಮೈಗುಡದಲ್ಲಿ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈ ಫೋನ್ ಕರೆಯನ್ನು ರಘುನಂದನ್ ಆಪ್ತ ಸಹಾಯಕರು ಸ್ವೀಕರಿಸಿದ್ದಾರೆ. ಈ ಬೆದರಿಕೆ ಕರೆಯ ಬಗ್ಗೆ ರಘುನಂದನ್ ಅವರು ಡಿಜಿಪಿ, ಮೇದಕ್ ಜಿಲ್ಲಾ ಎಸ್ಪಿ ಮತ್ತು ಇತರ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಬೆದರಿಕೆ ಬಗ್ಗೆ ತಿಳಿದ ನಂತರ, ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಗೆ ಮಾಡಲಾಗಿದೆ.

Category
ಕರಾವಳಿ ತರಂಗಿಣಿ