image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕ ನಡೆಸಿದ ದಾಳಿಗೆ ತಕ್ಕ ಪ್ರತ್ಯುತ್ತರದ ಎಚ್ಚರಿಕೆ ನೀಡಿದ ಇರಾನ್!

ಅಮೆರಿಕ ನಡೆಸಿದ ದಾಳಿಗೆ ತಕ್ಕ ಪ್ರತ್ಯುತ್ತರದ ಎಚ್ಚರಿಕೆ ನೀಡಿದ ಇರಾನ್!

ಯುಎಸ್‌ಎ : ಇರಾನ್‌ನ ಮೂರು ಪರಮಾಣು ಸೌಲಭ್ಯದ ಅಮೆರಿಕ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆಯಲ್ಲಿರುವ ಇರಾನ್‌ ಪ್ರತಿನಿಧಿ ಅಮೀರ್ ಸಯೀದ್ ಇರಾವನಿ ಅವರು ಖಂಡಿಸಿದ್ದು, ಇಸ್ರೇಲ್​ ರಾಜತಾಂತ್ರಿಕ ಪ್ರಯತ್ನಗಳನ್ನು ನಾಶ ಮಾಡುತ್ತಿದೆ ಎಂದರು. ಅಲ್ಲದೇ, ಸಮಯ, ಸ್ವರೂಪ ಮತ್ತು ಪ್ರಮಾಣವನ್ನು ನಿರ್ಧರಿಸಿ ಇರಾನ್ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಸೂಕ್ತ ಸಮಯ, ಸ್ವರೂಪ ಮತ್ತು ಪ್ರಮಾಣವನ್ನು ನಮ್ಮ ಸಶಸ್ತ್ರ ಪಡೆಗಳು ನಿರ್ಧರಿಸಿ ದಾಳಿಗೆ ಪ್ರತಿಕ್ರಿಯೆ ನೀಡಲಿವೆ ಎಂದರು.

ಅಮೆರಿಕದ ದಾಳಿ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಹಾಗು ರಾಜಕೀಯಪ್ರೇರಿತ ಕ್ರಮ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಇಸ್ರೇಲ್​ ರಾಜತಾಂತ್ರಿಕ ವ್ಯವಸ್ಥೆಯನ್ನೇ ನಾಶಮಾಡಬೇಕು ಎಂದು ನಿರ್ಧರಿಸಿದೆ. ಇದೊಂದು ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿತಪ್ಪಿಸುವ ವಂಚನೆ ಎಂದರು. ಇದೇ ವೇಳೆ, ಅಮೆರಿಕದ ಜೊತೆಗೆ ಇರಾನ್ ಮಾತುಕತೆಗೆ ಮುಂದಾಗಬೇಕು ಎಂಬ ಪಾಶ್ಚಿಮಾತ್ಯ ದೇಶಗಳ ಕರೆ ವ್ಯಂಗ್ಯಾತ್ಮಕ ಎಂದು ಹೇಳಿದರು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ನಿರ್ಮಿಸಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆ, ಈ ನಿರ್ಣಾಯಕ ಕ್ಷಣದಲ್ಲಿ ಕಾರ್ಯನಿರ್ವಹಿಸಲು ವಿಫಲವಾದರೆ, ಅವರು ವಿಶ್ವಾಸಾರ್ಹತೆ ಮತ್ತು ಪ್ರಸ್ತುತತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ