image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖಮೇನಿ ಹತ್ಯೆಯ ಸುಳಿವು ನೀಡಿದ ಇಸ್ರೇಲ್

ಖಮೇನಿ ಹತ್ಯೆಯ ಸುಳಿವು ನೀಡಿದ ಇಸ್ರೇಲ್

ಟೆಲ್​ ಅವಿವ್​: ಆಸ್ಪತ್ರೆಯ ಮೇಲೆ ಇರಾನ್​ ಕ್ಷಿಪಣಿ ದಾಳಿ ಮಾಡಿದ್ದಕ್ಕೆ ತೀವ್ರ ವ್ಯಗ್ರವಾಗಿರುವ ಇಸ್ರೇಲ್​​, ಅದರ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡುವ ಸುಳುಹು ನೀಡಿದೆ. ಜನರು ಮತ್ತು ಆಸ್ಪತ್ರೆಗಳ ಮೇಲೆ ಇರಾನ್​ ದಾಳಿ ನಡೆಸುತ್ತಿದೆ. ಇಂದಿನ ದಾಳಿಯಲ್ಲಿ ಆಸ್ಪತ್ರೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ. ಇದಕ್ಕಿಂತ ನೀಚ ಕೃತ್ಯ ಇನ್ನೊಂದಿಲ್ಲ. ಆ ದೇಶದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಭೂಮಿ ಮೇಲೆ ಇರಲು ಅರ್ಹನಲ್ಲ ಎಂದು ಇಸ್ರೇಲ್​ ಗುಡುಗಿದೆ.

ಈ ಬಗ್ಗೆ ಮಾತನಾಡಿರುವ ರಕ್ಷಣಾ ಸಚಿವ ಇಸ್ರೇಲ್​ ಕಾಟ್ಜ್​, ಇರಾನಿನ ಕ್ಷಿಪಣಿಗಳು ಸಕೊರೊ ಆಸ್ಪತ್ರೆಗೆ ಅಪ್ಪಳಿಸಿ, ಕನಿಷ್ಠ 40 ಜನರು ಗಾಯಗೊಂಡಿದ್ದಾರೆ. ದುರಹಂಕಾರಿ ನಾಯಕ ಖಮೇನಿ ಭೂಮಿ ಇರಲು ಯೋಗ್ಯನಲ್ಲ ಎಂದು ಹೇಳುವ ಮೂಲಕ ಹತ್ಯೆ ಮಾಡುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದಾರೆ. "ಇರಾನ್‌ನಂತಹ ದೇಶವನ್ನು ಮುನ್ನಡೆಸುವ ಮತ್ತು ಇಸ್ರೇಲ್‌ನ ನಾಶವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಂಡಿರುವ ಖಮೇನಿಯಂತಹ ಸರ್ವಾಧಿಕಾರಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ನಮ್ಮ ಭದ್ರತಾ ಪಡೆಗಳಿಗೆ ಏನು ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ನಮ್ಮ ಪಡೆಗಳು ಗುರಿ ಸಾಧಿಸಲಿವೆ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಮೇನಿಯನ್ನು ಹತ್ಯೆ ಮಾಡುವ ಯೋಜನೆಯನ್ನು ತಡೆದಿದ್ದರು. ಈ ಹಂತದಲ್ಲಿ ಖಮೇನಿ ಹತ್ಯೆ ಸರಿಯಲ್ಲ ಎಂದು ಇಸ್ರೇಲ್​​ನ ದಾಳಿಗೆ ಬ್ರೇಕ್​ ಹಾಕಿದ್ದರು. ಇದೀಗ, ಆಸ್ಪತ್ರೆ ಮೇಲಿನ ದಾಳಿಯನ್ನೇ ಮುಂದು ಮಾಡಿಕೊಂಡು ಆತನನ್ನು ಈ ಲೋಕದಿಂದ ಕಳುಹಿಸುವ ಬಗ್ಗೆ ಇಸ್ರೇಲ್​ ಚಿಂತಿಸಿದೆ ಎಂಬುದು ರಕ್ಷಣಾ ಸಚಿವರ ಹೇಳಿಕೆ ಸೂಚಿಸುತ್ತಿದೆ. ಇಸ್ರೇಲ್​​ನ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಸಕೊರಾ ವೈದ್ಯಕೀಯ ಕಟ್ಟಡಕ್ಕೆ ಇಂದು ಬೆಳಗ್ಗೆ ಇರಾನ್​ ಪಡೆಗಳು ಕ್ಷಿಪಣಿ ದಾಳಿ ಮಾಡಿವೆ. ಇದರಿಂದ ಆಸ್ಪತ್ರೆಯ ಕಟ್ಟಡ ಛಿದ್ರವಾಗಿದೆ. ಈ ವೇಳೆ ಅಲ್ಲಿದ್ದವರ ಪೈಕಿ 47 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಈ ದಾಳಿಯ ಬಳಿಕ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಇರಾನ್​​ಗೆ ನೇರ ಸಂದೇಶ ರವಾನಿಸಿದರು.

Category
ಕರಾವಳಿ ತರಂಗಿಣಿ