image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಸ್ರೇಲ್​ ನಡೆಸಿದ ದಾಳಿಗೆ ಪ್ರತಿಯಾಗಿ ​ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್

ಇಸ್ರೇಲ್​ ನಡೆಸಿದ ದಾಳಿಗೆ ಪ್ರತಿಯಾಗಿ ​ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್

ಇಸ್ರೇಲ್​: ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್​ ಇದೀಗ, ನೇರವಾಗಿ ಆಸ್ಪತ್ರೆಗಳ ಮೇಲೆ ತನ್ನ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಗುರುವಾರ ಬೆಳಗ್ಗೆ ಇಸ್ರೇಲ್​ನ ಅತಿದೊಡ್ಡ ಆಸ್ಪತ್ರೆಯಾದ ಸರೋಕಾ ವೈದ್ಯಕೀಯ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ಮಾಡಿ ತೀವ್ರ ಹಾನಿ ಉಂಟು ಮಾಡಿದೆ. ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆಗೆ ಕ್ಷಿಪಣಿ ಅಪ್ಪಳಿಸಿದ ಬಳಿಕ ಅಲ್ಲಿದ್ದ ಜನರು, ವೈದ್ಯರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಕ್ಷಿಪಣಿ ದಾಳಿಯಿಂದಾಗಿ ಕಟ್ಟಡವು ತೀವ್ರ ಹಾನಿಗೀಡಾಗಿದೆ. ಆಸ್ಪತ್ರೆಯ ಕಿಟಕಿಗಳು ಛಿದ್ರವಾಗಿವೆ. ಕಟ್ಟಡದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿದ್ದು, ಜನರು ಆತಂಕದಲ್ಲಿರುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣಬಹುದು.

ಆಸ್ಪತ್ರೆ ಮೇಲೆ ದಾಳಿ ಮಾಡಿದ ಇರಾನ್​ ವಿರುದ್ಧ ಇಸ್ರೇಲ್ ಅಧ್ಯಕ್ಷ ಬೆಂಜಮಿನ್​ ನೆತನ್ಯಾಹು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವಸತಿ, ಆಸ್ಪತ್ರೆಗಳ ಮೇಲೆ ದಾಳಿ ಮಾಡುತ್ತಿರುವ ಇರಾನ್​ಗೆ ತಕ್ಕ ಪಾಠ ಕಲಿಸಲಾಗುವುದು. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಜನರ ಮೇಲೆ ದಾಳಿ ಮಾಡಿದ್ದು ಅಪರಾಧ ಎಂದು ಅವರು ಗುಡುಗಿದ್ದಾರೆ. ಇರಾನ್​ ಎಲ್ಲೆಲ್ಲಿ ದಾಳಿ ಮಾಡಬಹುದು ಎಂದೆಣಿಸಿರುವ ಇಸ್ರೇಲ್​, ಜನರನ್ನು ಬಂಕರ್​ಗಳಲ್ಲಿ ಆಶ್ರಯ ಪಡೆಯಲು ಮತ್ತು ಆಸ್ಪತ್ರೆಗಳನ್ನು ಭೂಗತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಆಸ್ಪತ್ರೆಗಳ ಕೆಳಭಾಗದಲ್ಲಿರುವ ರಹಸ್ಯ ತಾಣಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಶೇಷವಾಗಿ ವೆಂಟಿಲೇಟರ್‌, ತುರ್ತು ಚಿಕಿತ್ಸೆ ಅಗತ್ಯ ಇರುವವರಿಗೆ ಅಲ್ಲಿಯೇ ಶುಶ್ರೂಷೆ ನಡೆಸಲಾಗುತ್ತಿದೆ.

ದಾಳಿಗೆ ಒಳಗಾದ ಸಕೋರಾ ಆಸ್ಪತ್ರೆಯು ಇಸ್ರೇಲ್​ನ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇದು 1 ಸಾವಿರ ಹಾಸಿಗೆಗಳ ವ್ಯವಸ್ಥೆಯನ್ನು ಹೊಂದಿದೆ. ದಕ್ಷಿಣ ಭಾಗದ ಇಸ್ರೇಲ್​ನ ಸುಮಾರು 1 ಮಿಲಿಯನ್​ ಜನರಿಗೆ ಇದು ಸೇವೆಯನ್ನು ಒದಗಿಸುತ್ತಿದೆ.

Category
ಕರಾವಳಿ ತರಂಗಿಣಿ